ಕರೂರ್ ವೈಶ್ಯ ಬ್ಯಾಂಕ್: ನಿವ್ವಳ ಲಾಭ ಹೆಚ್ಚಳ

ಬೆಂಗಳೂರು: ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್ (ಕೆವಿಬಿ), ಮಾರ್ಚ್ 31ಕ್ಕೆ ಕೊನೆಗೊಂಡ 2020–21ನೇ ಹಣಕಾಸು ವರ್ಷದ ಮತ್ತು ನಾಲ್ಕನೇ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ಶೇ 23ರಷ್ಟು ಏರಿಕೆ ದಾಖಲಿಸಿ ರೂ 104 ಕೋಟಿಗೆ ತಲುಪಿದೆ.
‘2020-21ರ ಹಣಕಾಸು ವರ್ಷದಲ್ಲಿನ ನಿವ್ವಳ ಲಾಭವು ಶೇ 52.76ರಷ್ಟು ಹೆಚ್ಚಳಗೊಂಡು ರೂ 359 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರೂ 235 ಕೋಟಿಗಳಷ್ಟು ನಿವ್ವಳ ಲಾಭ ದಾಖಲಾಗಿತ್ತು. ರಿಟೇಲ್ ಸಾಲ ಖಾತೆಗಳು ಮತ್ತು ಚಿನ್ನದ ಸಾಲ ನೀಡಿಕೆಯಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಭವಿಷ್ಯದ ವೆಚ್ಚಗಳಿಗಾಗಿ ತೆಗೆದು ಇರಿಸುವ ಮೊತ್ತವು ಕಡಿಮೆ ಇರುವುದರಿಂದಲೂ ನಿವ್ವಳ ಲಾಭವು ಹೆಚ್ಚಳಗೊಂಡಿದೆ‘ ಎಂದು ಬ್ಯಾಂಕ್‌ನ ಸಿಇಒ ಬಿ. ರಮೇಶ್ ಬಾಬು ಅವರು ಹೇಳಿದ್ದಾರೆ.
‘ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ಒಟ್ಟು ವ್ಯವಹಾರವು ಶೇ 7.91ರಷ್ಟು ಏರಿಕೆ ದಾಖಲಿಸಿ ₹ 1,16,098 ಕೋಟಿಗೆ ತಲುಪಿದೆ. ಸಾಲ ನೀಡಿಕೆಯಲ್ಲಿ ಶೇ 8.87 ಹೆಚ್ಚಳ ದಾಖಲಾಗಿ ₹ 52,820 ಕೋಟಿಗೆ ತಲುಪಿದೆ. ಬ್ಯಾಂಕ್‌ನ ಒಟ್ಟಾರೆ ವಾರ್ಷಿಕ ವಹಿವಾಟು ಶೇ 8ರಷ್ಟು ಹೆಚ್ಚಳಗೊಂಡು ₹ 1,16,098 ಕೋಟಿಗೆ ತಲುಪಿದೆ‘ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.