ಶನಿವಾರ, ಮಾರ್ಚ್ 25, 2023
25 °C

ಕೆಐಒಸಿಎಲ್‌: ಪಿಎಂ ಕೇರ್ಸ್‌ಗೆ ₹10 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಪಿಎಂ ಕೇರ್ಸ್‌ ನಿಧಿಗೆ  ₹10.1 ಕೋಟಿ ಹಾಗೂ ಕಂಪನಿಯ ಉದ್ಯೋಗಿಗಳ ಒಂದು ದಿನದ ವೇತನದ ಮೊತ್ತವಾದ ₹23.72 ಲಕ್ಷ ನೀಡಿದೆ ಎಂದು ಕೆಐಒಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬಾರಾವ್ ತಿಳಿಸಿದ್ದಾರೆ.

ಇದಲ್ಲದೇ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹15 ಲಕ್ಷ ಮೊತ್ತವನ್ನೂ ನೀಡಲಾಗಿದೆ. ಜತೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಯಲ್ಲಿರುವ ವಲಸಿಗರಿಗೆ ಆಹಾರ ಒದಗಿಸುವುದಕ್ಕಾಗಿ 200 ಕ್ವಿಂಟಲ್ ಅಕ್ಕಿ ಖರೀದಿಸಲು ₹4.46 ಲಕ್ಷ ಮೊತ್ತವನ್ನು ಭಾರತದ ಆಹಾರ ನಿಗಮಕ್ಕೆ (ಎಫ್‌ಸಿಐ) ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು