ನವದೆಹಲಿ: ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ (ಆರ್‌ಸಿಎಲ್) ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸುವ ಕಾಲಮಿತಿಯನ್ನು ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲು ಸಾಲಗಾರರ ಸಮಿತಿಯು (ಸಿಒಸಿ) ನಿರ್ಧರಿಸಿದೆ.
ದಿವಾಳಿ ಪ್ರಕ್ರಿಯೆಯನ್ನು ಎರಡನೇ ಬಾರಿಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 3ಕ್ಕೆ ಇದ್ದ ಕಾಲಮಿತಿಯನ್ನು ಸೆಪ್ಟೆಂಬರ್ 2ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಅಂದರೆ ನವೆಂಬರ್ 2ರವರೆಗೆ ವಿಸ್ತರಣೆ ಮಾಡಲಾಗಿದೆ.
ಅರ್ಹ ಬಿಡ್‌ದಾರರು ಹೆಚ್ಚಿನ ಕಾಲಾವಧಿ ನೀಡುವಂತೆ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿವಾಳಿ ಸಂಹಿತೆಯ (ಐಬಿಸಿ) ನಿಯಮದ ಪ್ರಕಾರ, ಆಡಳಿತಾಧಿಕಾರಿಯು ಕಂಪನಿಯ ದಿವಾಳಿ ಪ್ರಕ್ರಿಯೆಯನ್ನು 180 ದಿನಗಳ ಒಳಗಾಗಿ ಅಂದರೆ ಜೂನ್ 3ರ ಒಳಗಾಗಿ ಪೂರ್ಣಗೊಳಿಸಬೇಕು.
ಅರ್ಹ ಬಿಡ್‌ದಾರರಿಗೆ ಪುನಶ್ಚೇತನ ಯೋಜನೆಯನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಜೂನ್ 20 ರಿಂದ ಜುಲೈ 11ರವರೆಗೆ ವಿಸ್ತರಿಸಲಾಗಿದೆ.