ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾವೆಲ್ಸ್‌: ಲ್ವಾಯ್ಡ್ ಬ್ರ್ಯಾಂಡ್‌ನ ರೆಫ್ರಿಜರೇಟರ್ ಮಾರುಕಟ್ಟೆಗೆ

Last Updated 25 ಸೆಪ್ಟೆಂಬರ್ 2020, 2:17 IST
ಅಕ್ಷರ ಗಾತ್ರ

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಎಲೆಕ್ಟ್ರಿಕಲ್ ಸರಕು (ಎಫ್‍ಎಂಇಜಿ) ತಯಾರಿಸುವ ಪ್ರಮುಖ ಕಂಪನಿಯಾಗಿರುವ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್, ತನ್ನ ಗೃಹೋಪಯೋಗಿ ಉತ್ಪನ್ನಗಳ ಜನಪ್ರಿಯ ಬ್ರ್ಯಾಂಡ್ ಲ್ವಾಯ್ಡ್ ಹೆಸರಿನಲ್ಲಿ ರೆಫ್ರಿಜರೇಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ವರ್ಷದ ದೀಪಾವಳಿ ವೇಳೆಗೆ ಹೆಚ್ಚುವರಿಯಾಗಿ 25 ಮಾದರಿಗಳನ್ನು ಪರಿಚಯಿಸುವ ಮೂಲಕ ಈ ರೆಫ್ರಿಜರೇಟರ್ ಶ್ರೇಣಿಯ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಮತ್ತುಹೊಸ ಶ್ರೇಣಿಯ ಡಿಷ್‍ವಾಷರ್‌ಗಳನ್ನೂ ಪರಿಚಯಿಸುವುದಾಗಿ ತಿಳಿಸಿದೆ.

ಈ ರೆಫ್ರಿಜರೇಟರ್‌ಗಳು 190 ಲೀಟರ್ ಸಾಮರ್ಥ್ಯದಿಂದ 587 ಲೀಟರ್ ಸಾಮರ್ಥ್ಯದವರೆಗೆ ದೊರೆಯಲಿವೆ. ಆರಂಭಿಕ ಬೆಲೆ ಕೊಡುಗೆಯು ₹ 10,000 ಗಳಿಂದ ₹ 84,990 ಗಳವರೆಗೆ ಇರಲಿದೆ. ಗುರುವಾರ ನಡೆದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲ್ವಾಯ್ಡ್‌ನ ಸಿಇಒ ಶಶಿ ಅರೋರಾ, ಕಂಪನಿಯು ಡಿಸಿ, ಸೈಡ್ ಬೈ ಸೈಡ್, ಫ್ರಾಸ್ಟ್ ಫ್ರೀ ಶ್ರೇಣಿಯ ರೆಫ್ರಿಜರೇಟರ್‌ಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು.

ಈ ಹೊಸ ಶ್ರೇಣಿಯ ರೆಫ್ರಿಜರೇಟರ್‌ಗಳು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡುವ ಬ್ಯಾಕ್ಟಷೀಲ್ಡ್ ತಂತ್ರಜ್ಞಾನ ಒಳಗೊಂಡಿವೆ. ಇನ್‍ವರ್ಟರ್ ತಂತ್ರಜ್ಞಾನದ ನೆರವಿನಿಂದ 2020ರ ಇಂಧನ ಮಾನದಂಡ ನಿಯಮಗಳಿಗೆ ಅನುಗುಣವಾಗಿದ್ದು, ಕಡಿಮೆ ವಿದ್ಯುತ್ ಬಳಸುತ್ತವೆ. 10 ವರ್ಷಗಳ ಕಂಪ್ರೆಷರ್ ವಾರಂಟಿ ಹೊಂದಿರಲಿವೆ. ದೇಶದಾದ್ಯಂತ ಇರುವ ಲ್ವಾಯ್ಡ್ ಬ್ರ್ಯಾಂಡ್ ಮಳಿಗೆ, ಆಫ್‍ಲೈನ್ ಡೀಲರ್ ಮತ್ತು ಲ್ವಾಯ್ಡ್ ಆನ್‍ಲೈನ್ ಮಳಿಗೆಗಳಲ್ಲಿ ದೊರೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT