ಮಂಗಳವಾರ, ಮಾರ್ಚ್ 31, 2020
19 °C

ಮಾರುತಿ ಆಲ್ಟೊ: 38 ಲಕ್ಷ ಮಾರಾಟದ ಮೈಲುಗಲ್ಲು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರುತಿ ಸುಜುಕಿ ಇಂಡಿಯಾದ ಜನಪ್ರಿಯವಾಗಿರುವ ಸಣ್ಣ ಕಾರ್ ಆಲ್ಟೊ 38 ಲಕ್ಷ ಮಾರಾಟದ ಮೈಲುಗಲ್ಲು ಸಾಧಿಸಿದೆ.

ಭಾರತದಲ್ಲಿ ಆಲ್ಟೊ ಕಾರ್‌ ಸತತ 15ನೇ ವರ್ಷದಲ್ಲಿಯೂ ಅತಿ ಹೆಚ್ಚು ಮಾರಾಟ ಕಂಡಿದೆ ಎಂದು ಕಂಪನಿ ತಿಳಿಸಿದೆ.

‘ಮೊದಲ ಬಾರಿಗೆ ಕಾರ್‌ ಖರೀದಿಸುವವರು ಆಲ್ಟೊವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಾಂಪ್ಯಾಕ್ಟ್‌ ವಿನ್ಯಾಸ, ಗರಿಷ್ಠ ಇಂಧನ ದಕ್ಷತೆ, ಮೇಲ್ದರ್ಜೆಗೇರಿಸಿದ ಸುರಕ್ಷತಾ ಸೌಲಭ್ಯ ಇತ್ಯಾದಿಗಳಿಂದಾಗಿ ಆಲ್ಟೊ ಖರೀದಿಸುತ್ತಿದ್ದಾರೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೆಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಈ ವರ್ಷ ಬಿಎಸ್‌–6 ಎಂಜಿನ್‌ನ ಆಲ್ಟೊ ಬಿಡುಗಡೆ ಮಾಡಲಾಗಿದೆ. ಎಬಿಎಸ್‌, ಇಬಿಡಿ, ರಿವರ್ಸ್‌ ಪಾರ್ಕಿಂಗ್‌ ಸೆನ್ಸರ್‌, ಸ್ಪೀಡ್‌ ಅಲರ್ಟ್‌ ಸಿಸ್ಟಂ ಸೇರಿದಂತೆ ಇನ್ನೂ ಹಲವು ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

ಇದರ ಬೆಲೆ ₹ 2.89 ಲಕ್ಷದಿಂದ ₹ 4.09 ಲಕ್ಷದವರೆಗೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು