ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಸಾಲ: ಮಾರುತಿ–ಕರೂರ್‌ ವೈಶ್ಯ ಬ್ಯಾಂಕ್‌ ಒಪ್ಪಂದ

Last Updated 17 ಜೂನ್ 2020, 10:57 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಗ್ರಾಹಕರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಲು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಕರೂರ್‌ ವೈಶ್ಯ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಎಲ್ಲಾ ಮಾದರಿಗಳ ಮೇಲೆ ಆರು ತಿಂಗಳ ಕಂತು ಪಾವತಿ ಬಿಡುವಿನ ಸೌಲಭ್ಯದ ಜತೆಗೆ ಶೇ 100ರಷ್ಟು ಆನ್‌ರೋಡ್‌ ಫಂಡಿಂಗ್‌ ನೀಡುವ ವಿಶೇಷ ಯೋಜನೆ ಜಾರಿಗೆ ತಂದಿದೆ. ಆಕರ್ಷಕ ಬಡ್ಡಿದರದ ಜತೆಗೆ ಆದಾಯ ದಾಖಲೆ ಇಲ್ಲದೇ ಇದ್ದರೂ ಸಾಲ ಪಡೆಯಬಹುದಾಗಿದೆ.

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಇಎಂಐ ಹಾಲಿಡೇ ಸೌಲಭ್ಯವು ಗ್ರಾಹಕರಿಗೆ ಅಗತ್ಯವಾದ ಹಣಕಾಸು ಪರಿಹಾರ ನೀಡಲಿದೆ’ ಎಂದು ಕಂಪನಿಯ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಅವರು ಹೇಳಿದ್ದಾರೆ.

‘ಗ್ರಾಹಕರಿಗೆ ಅನುಕೂಲಕರವಾದ ಮತ್ತು ಕಡಿಮೆ ವೆಚ್ಚದ ಕೊಡುಗೆಗಳನ್ನು ನೀಡಲು ಮಾರುತಿ ಸುಜಕಿ ಜತೆಗಿನ ಒಪ್ಪಂದವು ಮುಖ್ಯವಾಗಿದೆ’ ಎಂದು ಕರೂರ್‌ ವೈಶ್ಯ ಬ್ಯಾಂಕ್‌ನ ಅಧ್ಯಕ್ಷ ಜೆ.ನಟರಾಜನ್‌ ತಿಳಿಸಿದ್ದಾರೆ.

15 ನಿಮಿಷಗಳಲ್ಲಿ ಸಾಲ ಮಂಜೂರು ಮಾಡಲಿದೆ. ಹಾಲಿ ಗ್ರಾಹಕರಿಗೆ ಅರ್ಜಿ ಸಲ್ಲಿಸಿದ ದಿನವೇ ಸಾಲ ಸಿಗಲಿದೆ. ಎಲ್ಲವೂ ಡಿಜಿಟಲ್‌ ರೂಪದಲ್ಲಿಯೇ ಇರಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT