ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಬ್ಯಾಗ್‌ ಲೋಪ ಸರಿಪಡಿಸಲಿರುವ ಮಾರುತಿ

Last Updated 18 ಜನವರಿ 2023, 23:02 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಕಂಪನಿಯು ತನ್ನ ವಿವಿಧ ಮಾದರಿಗಳ ಒಟ್ಟು 17,362 ಕಾರುಗಳನ್ನು ಹಿಂದಕ್ಕೆ ಪಡೆದು, ಅವುಗಳ ಏರ್‌ಬ್ಯಾಗ್‌ ನಿಯಂತ್ರಕ ವ್ಯವಸ್ಥೆಯಲ್ಲಿ ದೋಷ ಇದೆಯೇ ಎಂಬುದನ್ನು ಪರಿಶೀಲಿಸಲಿದೆ. ದೋಷ ಇದ್ದಲ್ಲಿ ಅದನ್ನು ಬದಲಿಸಿ ಕೊಡಲಿದೆ.

2022ರ ಡಿಸೆಂಬರ್‌ 8ರಿಂದ ಈ ವರ್ಷದ ಜನವರಿ 12ರವರೆಗೆ ತಯಾರಾದ ಆಲ್ಟೊ ಕೆ10, ಎಸ್‌–ಪ್ರೆಸೊ, ಇಕೊ, ಬ್ರೆಜಾ, ಬಲೆನೊ ಮತ್ತು ಗ್ರ್ಯಾಂಡ್‌ ವಿಟಾರಾ ಮಾದರಿಗಳನ್ನು ಕಂಪನಿಯು ಹಿಂದಕ್ಕೆ ಪಡೆದು, ಲೋಪವನ್ನು ಪರಿಶೀಲಿಸಲಿದೆ. ಈ ವಿಚಾರವನ್ನು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಲೋಪ ಕಂಡುಬಂದಲ್ಲಿ ಅದನ್ನು ಕಂಪನಿಯು ಉಚಿತವಾಗಿ ಬದಲಿಸಿ ಕೊಡಲಿದೆ. ‘ಏರ್‌ಬ್ಯಾಗ್‌ ನಿಯಂತ್ರಕ ವ್ಯವಸ್ಥೆಯಲ್ಲಿ ಲೋಪ ಇರುವ ಸಾಧ್ಯತೆ ಇದೆ ಎಂಬ ಅನುಮಾನವಿದೆ’ ಎಂದು ಅದು ತಿಳಿಸಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ, ಲೋಪ ಸರಿಪಡಿಸುವವರೆಗೆ ವಾಹನ ಮಾಲೀಕರು ಕಾರು ಚಲಾಯಿಸಬಾರದು ಎಂದು ಕಂಪನಿ ಸಲಹೆ ನೀಡಿದೆ. ವಾಹನ ಮಾಲೀಕರಿಗೆ ಮಾರುತಿ ಸುಜುಕಿ ಕಡೆಯಿಂದ ಸಂದೇಶ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT