ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗೋಲಿಯಾದಲ್ಲಿ ತೈಲ ಉತ್ಪಾದನೆ: ಭಾರತದ ಕಂಪನಿಗೆ ಯೋಜನೆಯ ಗುತ್ತಿಗೆ

Published 29 ಸೆಪ್ಟೆಂಬರ್ 2023, 16:14 IST
Last Updated 29 ಸೆಪ್ಟೆಂಬರ್ 2023, 16:14 IST
ಅಕ್ಷರ ಗಾತ್ರ

ನವದೆಹಲಿ: ಮಂಗೋಲಿಯಾದಲ್ಲಿ ತೈಲ ಸಂಸ್ಕರಣಾ ಘಟಕ ನಿರ್ಮಾಣ ಮಾಡುವ ₹5,400 ಕೋಟಿ ಮೊತ್ತದ ಯೋಜನೆಯನ್ನು ಭಾರತದ ಮೇಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್ (ಎಂಇಐಎಲ್‌) ಪಡೆದುಕೊಂಡಿದೆ.

ಸರ್ಕಾರಿ ಸ್ವಾಮ್ಯದ ಮಂಗೋಲಿಯಾ ರಿಫೈನರಿಯು ಈ ಯೋಜನೆಯನ್ನು ನೀಡಿದೆ ಎಂದು ಎಂಇಐಎಲ್‌ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದೆ.

ಈ ತೈಲ ಸಂಸ್ಕರಣಾ ಘಟಕವು ವಾರ್ಷಿಕ 15 ಲಕ್ಷ ಟನ್‌ ಸಾಮರ್ಥ್ಯವನ್ನು ಹೊಂದುವ ನಿರೀಕ್ಷೆ ಮಾಡಲಾಗಿದ್ದು, ಮಂಗೋಲಿಯಾದ ಪೆಟ್ರೋಲ್‌, ಡೀಸೆಲ್, ವಿಮಾನ ಇಂಧನ ಮತ್ತು ಎಲ್‌ಪಿಜಿ ಬೇಡಿಕೆಯನ್ನು ಈಡೇರಿಸಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT