ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್‌ಗೆ ಪಿಂಚಣಿ, ವಿಮೆ, ಭವಿಷ್ಯ ನಿಧಿಗಳ ನಿರ್ವಹಣೆ: ಬೇಡಿಕೆ

Last Updated 10 ಡಿಸೆಂಬರ್ 2022, 17:44 IST
ಅಕ್ಷರ ಗಾತ್ರ

ಕೋಲ್ಕತ್ತ: ಮ್ಯೂಚುವಲ್ ಫಂಡ್‌ ಉದ್ಯಮಕ್ಕೆ ಪಿಂಚಣಿ, ಭವಿಷ್ಯ ನಿಧಿ ಮತ್ತು ವಿಮಾ ನಿಧಿಗಳನ್ನು ನಿರ್ವಹಣೆ ಮಾಡುವ ಅವಕಾಶ ನೀಡುವಂತೆ ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಅಧಿಕಾರಿಗಳು ಕೇಳಿದ್ದಾರೆ.

2027ರ ವೇಳೆಗೆ ಮ್ಯೂಚುವಲ್‌ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವನ್ನು ₹80 ಲಕ್ಷ ಕೋಟಿಗೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ, ಪಿಂಚಣಿ, ಭವಿಷ್ಯ ನಿಧಿ ಮತ್ತು ವಿಮಾ ನಿಧಿಗಳನ್ನು ನಿರ್ವಹಿಸುವ ಅವಕಾಶ ನೀಡಿದಲ್ಲಿ 2027ಕ್ಕೂ ಮೊದಲೇ ಗುರಿ ತಲುಪಲಾಗುವುದು ಎಂದು ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಎನ್‌.ಎಸ್‌. ವೆಂಕಟೇಶ್‌ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಕುರಿತು ಬಜೆಟ್‌ ಪ್ರಸ್ತಾವದಲ್ಲಿಯೂ ಒಕ್ಕೂಟವು ಬೇಡಿಕೆ ಸಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ₹40 ಲಕ್ಷ ಕೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT