ಕೋಲ್ಕತ್ತ: ಕಿರು ಹಣಕಾಸು ಸಂಸ್ಥೆಗಳು (ಎಂಎಫ್ಐ) ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬೇಕು ಎಂದಾದರೆ ವಿಶ್ವಾಸಾರ್ಹತೆಯನ್ನು ಹಾಗೂ ಗ್ರಾಹಕರ ನಂಬಿಕೆಯನ್ನು ಮತ್ತೆ ಗಳಿಸಬೇಕು ಎಂದು ಪಿಡಬ್ಲ್ಯುಸಿ ಮತ್ತು ಸ್ವಯಂ ನಿಯಂತ್ರಣ ಸಂಸ್ಥೆ ‘ಸಾದನ್’ ನಡೆಸಿದ ಜಂಟಿ ಅಧ್ಯಯನವೊಂದು ಹೇಳಿದೆ.

ಕಿರು ಹಣಕಾಸು ವ್ಯವಸ್ಥೆಯು ತನ್ನ ಪಾಲುದಾರರಾದ ಸಾಲ ಪಡೆಯುವವರು, ಕ್ಷೇತ್ರ ಅಧಿಕಾರಿಗಳು, ಸಾಲದಾತ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಆಧರಿಸಿ ನಿಂತಿದೆ ಎಂದು ವರದಿಯು ಹೇಳಿದೆ.

‘ವಿಶ್ವಾಸಾರ್ಹತೆಯನ್ನು ಮತ್ತೆ ಗಳಿಸಿಕೊಳ್ಳುವುದು ಹಾಗೂ ನಂಬಿಕೆಯನ್ನು ಸಂಪಾದಿಸುವುದು ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಸವಾಲುಗಳು’ ಎಂದು ವರದಿಯು ಹೇಳಿದೆ.

ಕಿರು ಹಣಕಾಸು ಸಂಸ್ಥೆಗಳು ಬಾಹ್ಯ ಪಾಲುದಾರರ ಬೆಂಬಲವನ್ನು ಕಳೆದುಕೊಳ್ಳುತ್ತಿವೆ. ಹೂಡಿಕೆದಾರರ ನೆರವು ಕಡಿಮೆ ಆಗುತ್ತಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.