ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ! ಅದ್ದೂರಿತನ, ಮುಖಗಳಷ್ಟೇ ತೆರೆಗೆ ಹೊಸದು. ಕಥೆಯುದ್ದಕ್ಕೂ ಫ್ಲ್ಯಾಶ್ಬ್ಯಾಕ್ಗಳೇ ತುಂಬಿಕೊಂಡಿದ್ದು, ಎಲ್ಲವೂ ನಿರೀಕ್ಷಿತ.

‘ಮ್ಯಾಡಿ’(ಝೈದ್ ಖಾನ್) ‘ಲವ್’ ಎಂಬ ಪದ ಕೇಳಿದರೆ ಸಿಟ್ಟಿಗೇಳುವಾತ. ಪ್ರೀತಿಸಿದ ಹುಡುಗಿ ಕೈಕೊಟ್ಟ ಕಾರಣಕ್ಕೆ ಮದ್ಯದಲ್ಲೇ ಈಜುವಾತ. ಇಂತಹ ‘ಮ್ಯಾಡಿ’ ಜೀವನಕ್ಕೆ ‘ಇತಿಹಾಸಿನಿ’(ರಚಿತಾ ರಾಮ್) ಪ್ರವೇಶವಾಗುತ್ತದೆ. ಇದರಿಂದ ‘ಮ್ಯಾಡಿ’ ಕೃಷ್ಣಾಪುರ ಎಂಬ ಊರಿನಲ್ಲಿ ‘ಮಾಧವ’ ಎಂಬ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದ ಕಥೆ ತೆರೆದುಕೊಳ್ಳುತ್ತದೆ. ‘ಗೀತಾ’ಳ(ಮಲೈಕಾ) ಪ್ರವೇಶವೂ ಆಗುತ್ತದೆ. ಇಲ್ಲಿಂದ ಕಥೆ ಭೂತಕಾಲ ಮತ್ತು ವರ್ತಮಾನದಲ್ಲಿ ಹೊರಳುತ್ತಾ ಸಾಗುತ್ತದೆ.

ಕಥೆಯ ಆರಂಭದಲ್ಲಿ ನಾಯಕನನ್ನು ಅದ್ದೂರಿಯಾಗಿ ತೋರಿಸಬೇಕು ಎನ್ನುವ ಕಾರಣಕ್ಕೆ ಅನವಶ್ಯಕ ಫೈಟ್ಸ್ ಹಾಗೂ ‘ಬ್ಲಡಿ ಲವ್’ ಎಂಬ ಹಾಡನ್ನು ಹಾಕಲಾಗಿದೆ. ಇದು ಸಿನಿಮಾ ಅವಧಿಯನ್ನು ಹೆಚ್ಚಿಸಿದೇ ವಿನಃ ಕಥೆಗೆ ಹೆಚ್ಚಿನ ಲಾಭವನ್ನೇನೂ ಉಂಟುಮಾಡಿಲ್ಲ. ಕಥೆಯ ಪ್ರತಿ ದೃಶ್ಯವೂ ನಿರೀಕ್ಷಿತವಾಗುತ್ತಾ ಸಿದ್ಧಸೂತ್ರದಲ್ಲೇ ಸಾಗುತ್ತದೆ. ‘ಕೃಷ್ಣ’, ‘ಬೇಬಿ’ ಸಿನಿಮಾಗಳ ದೃಶ್ಯಗಳ ಹೋಲಿಕೆಗಳ ಸರಪಳಿಯೇ ಇಲ್ಲಿದೆ.

ನಾಯಕ ಉಡುಪಿಯಿಂದ ಮಣಿಪಾಲಕ್ಕೆ ಹೋಗುವುದನ್ನೇ ಬೇರೆ ಊರಿಗೇ ಹೋಗುವಂತೆ ತೋರಿಸಲಾಗಿದೆ. ರಚಿತಾ ರಾಮ್–ರಂಗಾಯಣ ರಘು ಪಾತ್ರದ ಕಥೆ ಚೆನ್ನಾಗಿದೆ. ಝೈದ್ ನಟನೆಯಲ್ಲಿ ಹೆಚ್ಚಿನ ಅಂಕ ಪಡೆಯುವ ಹಳ್ಳಿಯ ಕಥೆಗೆ ಹೆಚ್ಚಿನ ಪ್ರಾಶಸ್ತ್ಯವನ್ನೇ ನಿರ್ದೇಶಕರು ನೀಡಿಲ್ಲ. ಬರವಣಿಗೆಯಲ್ಲಿ ಇನ್ನಷ್ಟು ಗಟ್ಟಿತನವಿರಬೇಕಿತ್ತು. ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾದ ‘ಹೇ ಶಾರದೆ’ ಹಾಗೂ ಆಲ್ ಒಕೆಯ ‘ಹ್ಯಾಪಿ’ ಹಾಡನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

ನಟನೆಯಲ್ಲಿ ರಚಿತಾ ರಾಮ್ ‘ಇತಿಹಾಸಿನಿ’ಯಾಗಿ ಜೀವಿಸಿದ್ದಾರೆ. ಝೈದ್, ಮಲೈಕಾ, ರಂಗಾಯಣ ರಘು, ಅಚ್ಯುತ್ ಕುಮಾರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‘ಅಯ್ಯೋ ಸಿವನೇ’ ಹಾಡು ಪದೇ ಪದೇ ಗುನುಗುವಂತಿದೆ. ಜೆ.ಎಸ್ ವಾಲಿ ಛಾಯಾಚಿತ್ರಗ್ರಹಣ ಈ ಹಾಡನ್ನು ಮತ್ತಷ್ಟು ಕಣ್ತುಂಬಿಕೊಳ್ಳುವಂತೆ ಮಾಡಿದೆ. ಸಿನಿಮಾ ನೋಡಿದ ಬಳಿಕ ‘ಕಲ್ಟ್’ ಎನ್ನುವ ಶೀರ್ಷಿಕೆ ಏಕೆ ಎನ್ನುವ ಪ್ರಶ್ನೆ ಮೂಡದೇ ಇರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.