ನವದೆಹಲಿ: ಮನೆ ಖರೀದಿದಾರರಿಗೆ ₹14,599 ಕೋಟಿ ವಂಚಿಸಿರುವ ಪ್ರಕರಣದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಜೆ.ಪಿ. ಇನ್ಫ್ರಾಟೆಕ್ ಸಂಸ್ಥೆಯ ಮಾಜಿ ಎಂ.ಡಿ. ಮನೋಜ್ ಗೌರ್ ಅವರನ್ನು ಗುರುವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯ ಅನ್ವಯ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಮನೆ ಖರೀದಿದಾರರಿಂದ ಹಣ ಸಂಗ್ರಹಿಸಿದ್ದ ಸಂಸ್ಥೆಯು ನಂತರ ಈ ಹಣವನ್ನು ಬೇರೆಡೆಗೆ ವರ್ಗಾಯಿಸಿತ್ತು. ಅಲ್ಲದೇ, ಯೋಜನೆಗಳನ್ನು ಅರ್ಧಕ್ಕೆ ನಿಲ್ಲಿಸಿ, ಹೂಡಿಕೆದಾರರಿಗೆ ವಂಚಿಸಿತ್ತು ಎಂದು ಇ.ಡಿ ತಿಳಿಸಿದೆ.

‘ಈ ಹಣದ ಪೈಕಿ ಮನೋಜ್ ಗೌರ್ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಜೆ.ಪಿ. ಸೇವಾ ಸಂಸ್ಥಾನ್ ಕೂಡ ಹಣ ಸ್ವೀಕರಿಸಿತ್ತು. ಈ ಮೂಲಕ ಮನೆ ಖರೀದಿದಾರರಿಗೆ ವಂಚಿಸಿದ ಆರೋಪವೂ ಗೌರ್ ಮೇಲೆ ದಾಖಲಿಸಲಾಗಿತ್ತು’ ಎಂದು ಇ.ಡಿ ತಿಳಿಸಿದೆ.

ಇದು ಸುಮಾರು ₹14,599 ಕೋಟಿ ಮೌಲ್ಯದ ವಂಚನೆ ಪ್ರಕರಣವಾಗಿದ್ದು, ಹಣದ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ದೆಹಲಿ– ಎನ್ಸಿಆರ್, ಮುಂಬೈನಲ್ಲಿ ಇ.ಡಿ ಶೋಧ ಕಾರ್ಯಾಚರಣೆ ನಡೆಸಿತ್ತು.
.ವಂಚನೆ ಪ್ರಕರಣ: ಜೆಪಿ ಇನ್ಫ್ರಾಟೆಕ್ ಕಂಪನಿ ಮೇಲೆ ED ದಾಳಿ; ₹1.70 ಕೋಟಿ ನಗದು ವಶ. ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪ: ಅನಿಲ್ ಅಂಬಾನಿಗೆ ಇ.ಡಿ ಸಮನ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.