ನವದೆಹಲಿ: ಟೈರುಗಳನ್ನು ತಯಾರು ಮಾಡುವ ಎಂಆರ್‌ಎಫ್ ಕಂಪನಿಯ ಷೇರು ಮೌಲ್ಯವು ದೇಶದ ಷೇರುಪೇಟೆಗಳಲ್ಲಿ ಮಂಗಳವಾರದ ವಹಿವಾಟಿನಲ್ಲಿ ₹1 ಲಕ್ಷದ ಗಡಿಯನ್ನು ದಾಟಿತು!

ದಿನದ ವಹಿವಾಟಿನ ನಡುವಿನಲ್ಲಿ ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ಷೇರಿನ ಮೌಲ್ಯವು ₹1,00,300ಕ್ಕೆ ತಲುಪಿತ್ತು. ವಹಿವಾಟಿನ ಕೊನೆಯಲ್ಲಿ ಮೌಲ್ಯವು ₹99,950ಕ್ಕೆ ಇಳಿಕೆಯಾಯಿತು. ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ಇದರ ಮೌಲ್ಯವು ವಹಿವಾಟಿನ ನಡುವಿನಲ್ಲಿ ₹1,00,439ಕ್ಕೆ ತಲುಪಿತ್ತು.

‘ದೇಶದ ಷೇರುಪೇಟೆಗಳಲ್ಲಿನ ಪ್ರಮುಖ ಷೇರುಗಳ ಪೈಕಿ ಒಂದಾಗಿರುವ ಎಂಆರ್‌ಎಫ್ ಇತಿಹಾಸ ಸೃಷ್ಟಿಸಿತು. ಆರು ಅಂಕಿಗಳ ಮೌಲ್ಯ (₹1 ಲಕ್ಷ) ಹೊಂದಿದ ಮೊದಲ ಷೇರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು’ ಎಂದು ಸ್ವಸ್ತಿಕಾ ಇನ್ವೆಸ್ಟ್‌ಮಾರ್ಟ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದ್ದಾರೆ.

ದೇಶದ ಷೇರುಪೇಟೆಗಳಲ್ಲಿ ಅತಿಹೆಚ್ಚಿನ ಮೌಲ್ಯ ಹೊಂದಿರುವ ಷೇರು ಎಂಆರ್‌ಎಫ್ ಕಂಪನಿಯದ್ದು. ಇದನ್ನು ಹೊರತುಪಡಿಸಿದರೆ ಹನಿವೆಲ್ ಆಟೊಮೇಷನ್ ಕಂಪನಿಯ ಷೇರಿಗೆ ಹೆಚ್ಚಿನ ಮೌಲ್ಯ ಇದೆ. ಇದರ ಬೆಲೆ ಮಂಗಳವಾರ ₹41,200 ಆಗಿತ್ತು.

ಮುಂಬೈ ಷೇರುಪೇಟೆಯಲ್ಲಿ ಇರುವ ಮಾಹಿತಿ ಪ್ರಕಾರ, ಎಂಆರ್‌ಎಫ್ ಕಂಪನಿಯು ಷೇರುದಾರರಿಗೆ ಇದುವರೆಗೆ ಬೋನಸ್ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.