ನವದೆಹಲಿ: ದೂರ ಅಂತರದ ಓಟಗಾರ್ತಿ ಪೂಜಾ ಆತ್ಮರಾಮ್ ಅವರು 2025ರ ನವೆಂಬರ್ನಲ್ಲಿ ಉದ್ದೀಪನ ಮದ್ದುಸೇವನೆ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದರು. ಈ ಬಗ್ಗೆ ಪೂಜಾ ತಪ್ಪೊಪ್ಪಿಕೊಂಡಿದ್ದಾರೆ. ಅವರ ಮೇಲೆ ವಿಧಿಸಲಾಗಿದ್ದ 4 ವರ್ಷಗಳ ಅಮಾನತು ಶಿಕ್ಷೆಯನ್ನು 3 ವರ್ಷಕ್ಕೆ ಕಡಿತ ಮಾಡಲಾಗಿದೆ ಎಂದು ವಿಶ್ವ ಅಥ್ಲೆಟಿಕ್ಸ್ನ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್ (ಎಐಯು) ಮಂಗಳವಾರ ತಿಳಿಸಿದೆ.

2024ರ ಇಂಡಿಯನ್ ಗ್ರ್ಯಾನ್ಪ್ರೀ2 ಕೂಟದಲ್ಲಿ 5,000 ಮೀ. ಹಾಗೂ 10,000 ಮೀ. ಓಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ಪ್ರಕರಣವೇನು?: 30 ವರ್ಷ ವಯಸ್ಸಿನ, ರಾಜಸ್ಥಾನದ ಅಥ್ಲೀಟ್ ಪೂಜಾ ಅವರು ಮುಂಬೈನಲ್ಲಿ 2025ರ ನ.23ರಂದು ನಡೆದ ನೇವಿ ಹಾಫ್ ಮ್ಯಾರಥಾನ್ನಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದರು. ಡೋಪಿಂಗ್ ಪರೀಕ್ಷೆಗೆ ತಕ್ಷಣವೇ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಪರೀಕ್ಷೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಪೂಜಾ ಪ್ರೇಕ್ಷಕರ ನಡುವೆ ತೆರಳಿ, ತಲೆಮರೆಸಿಕೊಂಡಿದ್ದರು ಎಂದು ಎಐಯು ತಿಳಿಸಿದೆ.

‘ಪೂಜಾ ಅವರು ಡೋಪಿಂಗ್ ಪರೀಕ್ಷೆಯ ಅರ್ಜಿಗೆ ಸಹಿ ಹಾಕಲು ನಿರಾಕರಿಸಿದ್ದರು. ಸ್ಪರ್ಧೆ ಮುಗಿದ ಬಳಿಕ ತಲೆಮರೆಸಿಕೊಂಡ ಅವರನ್ನು ಸಂಪರ್ಕಿಸಲು ಡೋಪಿಂಗ್ ನಿಯಂತ್ರಣ ಅಧಿಕಾರಿಗಳು ಯತ್ನಿಸಿದರು. ಆದರೆ, ಪೂಜಾ ಅವರು ಫೋನ್ ಕರೆಗಳನ್ನು ಸ್ವೀಕರಿಸಿರಲಿಲ್ಲ’ ಎಂದು ಹೇಳಿದೆ.

ತಪ್ಪೊಪ್ಪಿಗೆ: ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದಕ್ಕಾಗಿ ಪೂಜಾ ಅವರಿಗೆ ನಾಲ್ಕು ವರ್ಷಗಳ ಅಮಾನತು ವಿಧಿಸಿ ಫೆ.3 ರಂದು ಆದೇಶಿಸಲಾಗಿತ್ತು. ತಪ್ಪೊಪ್ಪಿಕೊಂಡ ಪೂಜಾ, ಮಾದರಿ ನೀಡಲು ವಿಫಲವಾಗಿದ್ದಕ್ಕೆ ವಿಷಾದವಿದೆ ಎಂದು ಫೆ.9ರಂದು ಪತ್ರ ಬರೆದಿದ್ದರು. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಒಂದು ವರ್ಷ ಇಳಿಕೆ ಮಾಡಲಾಗಿದೆ ಎಂದು ಎಐಯು ತಿಳಿಸಿದೆ.

2025ರ ನವೆಂಬರ್ 23 ಹಾಗೂ ನಂತರದಲ್ಲಿ ಅವರು ಗೆದ್ದ ಎಲ್ಲ ಫಲಿತಾಂಶಗಳು ಅನರ್ಹವಾಗಿವೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.