ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಎಫ್‌’ ನಿರ್ವಹಣಾ ಸಂಪತ್ತು ಮೌಲ್ಯ ವೃದ್ಧಿ

ಜಾಗೃತಿ ಕಾರ್ಯಕ್ರಮ: ವ್ಯವಸ್ಥಿತ ಹೂಡಿಕೆ ಯೋಜನೆಗೆ ಹೆಚ್ಚಿದ ಬೇಡಿಕೆ
Last Updated 7 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳು ನಿರ್ವಹಿಸುವ ಸಂಪತ್ತಿನ ಮೌಲ್ಯವು ಆಗಸ್ಟ್‌ ತಿಂಗಳಾಂತ್ಯಕ್ಕೆ ₹ 25 ಲಕ್ಷ ಕೋಟಿಗೆ ತಲುಪಿದೆ.

ಜುಲೈ ತಿಂಗಳಾಂತ್ಯದಲ್ಲಿ ಈ ಮೊತ್ತ ₹ 23.06 ಲಕ್ಷ ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಶೇ 8.41ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹ 20.6 ಲಕ್ಷ ಕೋಟಿಗಳಷ್ಟಿತ್ತು.

ಸರ್ಕಾರಿ ಸಾಲಪತ್ರ, ಟ್ರೆಷರಿ ಬಿಲ್‌ಗಳಲ್ಲಿ ಹೆಚ್ಚಿದ ಹೂಡಿಕೆ ಮತ್ತು ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆಯಿಂದ ಮ್ಯೂಚುವಲ್‌ ಫಂಡ್‌ ಉದ್ಯಮದ ಒಟ್ಟಾರೆ ಸಂಪತ್ತು ನಿರ್ವಹಣೆ ಮೊತ್ತವು ಈಗ ದಾಖಲೆ ಮಟ್ಟಕ್ಕೆ ತಲುಪಿದೆ.

ವ್ಯವಸ್ಥಿಕ ಹೂಡಿಕೆ ಯೋಜನೆಯು (ಎಸ್‌ಐಪಿ) ಸಾಮಾನ್ಯ ಹೂಡಿಕೆದಾರರಲ್ಲಿ ಜನಪ್ರಿಯಗೊಳ್ಳುತ್ತಿದೆ. ಸಣ್ಣ, ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡಲು ಇಲ್ಲಿ ಅವಕಾಶ ಇದೆ. ಹೂಡಿಕೆಯ ಪ್ರಯೋಜನಗಳ ಬಗ್ಗೆ ಉದ್ದಿಮೆ ನಡೆಸುತ್ತಿರುವ ತಿಳಿವಳಿಕೆ ಕಾರ್ಯಕ್ರಮಗಳೂ ಹೂಡಿಕೆದಾರರ ಮೇಲೆ ಪ್ರಭಾವ ಬೀರುತ್ತಿವೆ ಎಂದು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ (ಎಎಂಎಫ್‌ಐ) ಸಿಇಒ ಎನ್. ಎಸ್‌. ವೆಂಕಟೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT