ಶುಕ್ರವಾರ, ಏಪ್ರಿಲ್ 3, 2020
19 °C

ಏಪ್ರಿಲ್‌ನಿಂದ ನೈಸರ್ಗಿಕ ಅನಿಲ ಅಗ್ಗ

ಪಿಟಿಐ Updated:

ಅಕ್ಷರ ಗಾತ್ರ : | |

ONGC

ನವದೆಹಲಿ: ನೈಸರ್ಗಿಕ ಅನಿಲದ ಬೆಲೆಯು ಏಪ್ರಿಲ್‌ನಿಂದ ಶೇ 25ರಷ್ಟು ಅಗ್ಗವಾಗುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಅಗ್ಗವಾಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಮತ್ತು ಆಯಿಲ್‌ ಇಂಡಿಯಾ, ದೇಶದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದಲ್ಲಿ ಗರಿಷ್ಠ ಪಾಲು ಹೊಂದಿವೆ.

ರಸಗೊಬ್ಬರ ತಯಾರಿಕೆ, ವಿದ್ಯುತ್‌ ಉತ್ಪಾದನೆ, ವಾಹನಗಳಲ್ಲಿ ಬಳಸುವ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಮತ್ತು ಕೊಳವೆಮಾರ್ಗದ ಮೂಲಕ ಮನೆಗಳಿಗೆ ಪೂರೈಸುವ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್‌ ಮತ್ತು ಅಕ್ಟೋಬರ್‌ನಲ್ಲಿ ಪರಿಷ್ಕರಿಸಲಾಗುವುದು.

ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ನೈಸರ್ಗಿಕ ಅನಿಲದ ಬೆಲೆಯನ್ನು ಶೇ 12.5ರಷ್ಟು ತಗ್ಗಿಸಲಾಗಿತ್ತು. ಈಗ ಮತ್ತೆ ಬೆಲೆ ಇಳಿಕೆಯಿಂದ ಒಎನ್‌ಜಿಸಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ನ ವರಮಾನ ಕಡಿಮೆಯಾಗಲಿದೆ. ಒಎನ್‌ಜಿಸಿ ವರಮಾನವು ₹ 3,000 ಕೋಟಿಗಳಷ್ಟು ಕಡಿಮೆಯಾಗುವ ಅಂದಾಜಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು