ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯಾರಾ ಎನರ್ಜಿ ಲಾಭ ಅಲ್ಪ ಹೆಚ್ಚಳ

Last Updated 12 ಫೆಬ್ರುವರಿ 2023, 10:24 IST
ಅಕ್ಷರ ಗಾತ್ರ

ನವದೆಹಲಿ: ನಯಾರಾ ಎನರ್ಜಿ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹869 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಲಾಭವು ₹850 ಕೋಟಿಯಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 2ರಷ್ಟು ಅಲ್ಪ ಹೆಚ್ಚಳ ಕಂಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ನಿರ್ವಹಣೆಗಾಗಿ ತೈಲ ಸಂಸ್ಕರಣೆಯನ್ನು ಒಂದು ತಿಂಗಳವರೆಗೆ ಸ್ಥಗಿತಗೊಳಿಸಿದ್ದಲ್ಲದೆ, ಆಕಸ್ಮಿಕ ಲಾಭ ತೆರಿಗೆಯ ಕಾರಣಗಳಿಂದಾಗಿ ಲಾಭದಲ್ಲಿ ಅಲ್ಪ ಹೆಚ್ಚಳ ಕಾಣುವಂತಾಯಿತು ಎಂದು ಕಂಪನಿ ಹೇಳಿದೆ.

ಕಾರ್ಯಾಚರಣಾ ವರಮಾನ ₹32,412 ಕೋಟಿಯಿಂದ ₹24,757 ಕೋಟಿಗೆ ಏರಿಕೆ ಆಗಿದೆ. ಹಣಕಾಸು ವರ್ಷದ ಒಂಬತ್ತು ತಿಂಗಳಿನಲ್ಲಿ ₹6,226 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹1 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT