‘ಸುಸ್ತಿ ಸಾಲ ವಸೂಲಿಗೆ ಎನ್‌ಸಿಎಲ್‌ಟಿ ನೆರವು’

7

‘ಸುಸ್ತಿ ಸಾಲ ವಸೂಲಿಗೆ ಎನ್‌ಸಿಎಲ್‌ಟಿ ನೆರವು’

Published:
Updated:
Prajavani

ನವದೆಹಲಿ: ‘ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರದಿಂದ (ಎನ್‌ಸಿಎಲ್‌ಟಿ) ಸುಸ್ತಿ ಸಾಲ ವಸೂಲಿಗೆ ನೆರವಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

‘ಇದುವರೆಗೆ ₹ 890 ಸಾವಿರ ಕೋಟಿ ಸಾಲ ವಸೂಲಿಯಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಇನ್ನೂ ₹ 70 ಸಾವಿರ ಕೋಟಿ ವಸೂಲಿಯಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ

‘ವಾಣಿಜ್ಯ ಉದ್ದೇಶಿತ ಸಾಲಗಳನ್ನು ವಸೂಲಿ ಮಾಡುವುದರ ಬಗ್ಗೆ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಆರೋ‍ಪಿಸಿದ ಜೇಟ್ಲಿ, ವಸೂಲಿಯಾಗದ ಸಾಲ ವಸೂಲಿಗೆ ಎನ್‌ಡಿಎ ಸರ್ಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿತು. ದಿವಾಳಿ ಸಂಹಿತೆ (ಐಬಿಸಿ) ಜಾರಿಗೊಳಿಸಿತು.

‘2016ರ ಅಂತ್ಯದ ವೇಳೆಗೆ ಎನ್‌ಸಿಎಲ್‌ಟಿ ಕಾರ್ಪೊರೇಟ್‌ ವಲಯದ ಎನ್‌ಪಿಎ ಪ್ರಕರಣಗಳನ್ನು ಸ್ವೀಕರಿಸಲು ಆರಂಭಿಸಿತು. ಒಟ್ಟು 4,452 ಪ್ರಕರಣಗಳನ್ನು ಆರಂಭದ ಹಂತದಲ್ಲಿಯೇ ಇತ್ಯರ್ಥಗೊಳಿಸಿದೆ. 66 ಪ್ರಕರಣಗಳ ವಿಚಾರಣೆ ನಡೆಸಿ, ನ್ಯಾಯತೀರ್ಪಿನ ಮೂಲಕ ಇತ್ಯರ್ಥಪಡಿಸಿದೆ. 260 ಪ್ರಕರಣಗಳಲ್ಲಿ ಕಂಪನಿಗಳನ್ನು ಮುಚ್ಚಿ, ಉಳಿದ ಮೊತ್ತವನ್ನು ವಿತರಿಸುವ ಕೆಲಸ ಮಾಡಿದೆ.

‘ಭೂಷಣ್‌ ಪವರ್‌ ಆ್ಯಂಡ್‌ ಸ್ಟೀಲ್‌, ಎಸ್ಸಾರ್‌ ಸ್ಟೀಲ್‌ ಇಂಡಿಯಾ ದಂತಹ 12 ದೊಡ್ಡ ಪ್ರಕರಣಗಳು ಹಣಕಾಸು ವರ್ಷದಲ್ಲಿಯೇ ಅಂತ್ಯಗೊಳ್ಳುವ ನಿರೀಕ್ಷೆ ಇದೆ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !