ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತೆರಿಗೆ ಸಂಗ್ರಹ ಶೇ 22ರಷ್ಟು ಹೆಚ್ಚಳ

Published 10 ನವೆಂಬರ್ 2023, 14:23 IST
Last Updated 10 ನವೆಂಬರ್ 2023, 14:23 IST
ಅಕ್ಷರ ಗಾತ್ರ

ನವದೆಹಲಿ: ನೇರ ತೆರಿಗೆಯ ನಿವ್ವಳ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್ 9ರವರೆಗೆ ₹10.60 ಲಕ್ಷ ಕೋಟಿಯಷ್ಟು ಆಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಶುಕ್ರವಾರ ತಿಳಿಸಿದೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ಶೇ 22ರಷ್ಟು ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನೇರ ತೆರಿಗೆ ಸಂಗ್ರಹದ ಕುರಿತು ಮಾಡಿರುವ ಬಜೆಟ್‌ನಲ್ಲಿ ಅಂದಾಜಿನ ಶೇ 58ರಷ್ಟನ್ನು ದಾಟಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನೇರ ತೆರಿಗೆಯ ಮೂಲಕ ₹16.61 ಲಕ್ಷ ಕೋಟಿ ವರಮಾನ ಸಂಗ್ರಹ ಆಗುವ ಅಂದಾಜನ್ನು ಬಜೆಟ್‌ನಲ್ಲಿ ಮಾಡಲಾಗಿದೆ. 2022–23ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆಯ ಮೂಲಕ ₹16.61 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಕಾರ್ಪೊರೇಟ್‌ ತೆರಿಗೆಯ ನಿವ್ವಳ ಸಂಗ್ರಹ ಶೇ 12.48ರಷ್ಟು ಹೆಚ್ಚಾಗಿದೆ. ಆದಾಯ ತೆರಿಗೆ ಸಂಗ್ರಹವು ಶೇ 31.77ರಷ್ಟು ಏರಿಕೆ ಆಗಿದೆ. ನೇರ ತೆರಿಗೆಯ ಸರಾಸರಿ ಸಂಗ್ರಹವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 17.59ರಷ್ಟು ಹೆಚ್ಚಾಗಿ ₹12.37 ಲಕ್ಷ ಕೋಟಿಗೆ ತಲುಪಿದೆ ಎಂದು ಇಲಾಖೆಯು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT