ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ ಆದಾಯಕ್ಕೆ ತೆರಿಗೆ ವಿಧಿಸಲು ಮುಂದಾದ ಐಟಿ ಇಲಾಖೆ

Published 12 ಮೇ 2023, 5:02 IST
Last Updated 12 ಮೇ 2023, 5:02 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ವಿಡಿಯೊ ಸ್ಟ್ರೀಮಿಂಗ್‌ ಮೂಲಕ ನೆಟ್‌ಫ್ಲಿಕ್ಸ್‌ ಗಳಿಸುತ್ತಿರುವ ಆದಾಯಕ್ಕೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ.

ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

2021–22ರ ಹಣಕಾಸು ವರ್ಷದಲ್ಲಿ ನೆಟ್‌ಫ್ಲಿಕ್ಸ್‌ನ ಭಾರತ ಶಾಶ್ವತ ಸಂಸ್ಥೆ ₹ 550 ಮಿಲಿಯನ್‌ ಆದಾಯ ಗಳಿಸಿದೆ. ಭಾರತದಲ್ಲಿ ವಿಡಿಯೊ ಸ್ಟ್ರೀಮಿಂಗ್‌ ಮಾಡಲು, ನೆಟ್‌ಫ್ಲಿಕ್ಸ್‌ ಅಮೆರಿಕ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳನ್ನು ಬಳಸುತ್ತಿದೆ. ಹೀಗಾಗಿ ನೆಟ್‌ಫ್ಲಿಕ್ಸ್‌ಗೆ ತೆರಿಗೆ ವಿಧಿಸಬಹುದು ಎಂದು ಆದಾಯ ತೆರಿಗೆ ಇಲಾಖೆಯ ಕರಡು ಆದೇಶ ಪತ್ರದಲ್ಲಿ ಹೇಳಲಾಗಿದೆ.

ಎಲೆಕ್ಟ್ರಾನಿಕ್‌ ವಾಣಿಜ್ಯ ಸೇವೆ ನೀಡುತ್ತಿರುವ ವಿದೇಶಿ ಡಿಜಿಟಲ್‌ ಕಂಪನಿಗಳಿಗೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲು.

ಈ ಬಗ್ಗೆ ಮಾಹಿತಿ ಬಯಸಿ ನೆಟ್‌ಫ್ಲಿಕ್ಸ್‌ಗೆ ಹಾಕಲಾಗಿರುವ ಇ–ಮೇಲ್‌ಗೆ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT