ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣ ರಾಸಾಯನಿಕ ವಲಯ ಪ್ರವೇಶಿಸಿದ ನಿಪ್ಪಾನ್

Last Updated 1 ಮಾರ್ಚ್ 2023, 11:18 IST
ಅಕ್ಷರ ಗಾತ್ರ

ಬೆಂಗಳೂರು: ನಿಪ್ಪಾನ್ ಪೇಂಟ್ ಕಂಪನಿಯು ಕಟ್ಟಡ ನಿರ್ಮಾಣ ರಾಸಾಯನಿಕಗಳ ಮಾರುಕಟ್ಟೆ ಪ್ರವೇಶಿಸಿದೆ. ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಯೋಜನೆಯ ಭಾಗವಾಗಿ ನಿಪ್ಪಾನ್ ಕಂಪನಿಯು, ಮೂರು ವಲಯಗಳ ಮೇಲೆ ಹೆಚ್ಚಿನ ಗಮನ ನೀಡಲಿದೆ.

ಕಾಂಕ್ರೀಟ್‌ ಮಿಶ್ರಣಗಳು, ಕಾಂಕ್ರೀಟ್‌ ರಿಪೇರಿ, ಜಲ ನಿರೋಧಕ, ಹೈಬ್ರಿಡ್‌ ಸೀಲೆಂಟ್‌ಗಳು, ಸೀಲೆಂಟ್‌ಗಳ ಮಾರುಕಟ್ಟೆ ವಲಯದ ಮೇಲೆ ಕಂಪನಿಯು ಗಮನ ಕೇಂದ್ರೀಕರಿಸಲಿದೆ.

ಕಂಪನಿಯು ದ್ರವರೂಪದ ಉತ್ಪನ್ನಗಳನ್ನು ತನ್ನ ಚೆನ್ನೈ ಘಟಕದಲ್ಲಿ ಸಿದ್ಧಪಡಿಸಲಿದೆ. ಏರೋಸೋಲ್ ಆಧಾರಿತ ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಂಡ ಕಂಪನಿಗಳಿಂದ ಪಡೆಯಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಕ್ರಮಗಳ ಮೂಲಕ ನಿಪ್ಪಾನ್ ಕಂಪನಿಯು ಕಟ್ಟಡ ನಿರ್ಮಾಣ ರಾಸಾಯನಿಕಗಳ ವಲಯದಲ್ಲಿ ಪ್ರಮುಖ ಪಾಲುದಾರನಾಗಿ ಗುರುತಿಸಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT