ಅಹಮದಾಬಾದ್: ‘ದೇಶದಲ್ಲಿ ವಿದ್ಯುತ್ ಚಾಲಿತ (ಇವಿ) ವಾಹನಗಳ ಅಳವಡಿಕೆಗೆ ಉತ್ತಮ ಕಾರ್ಯ ಯೋಜನೆ ಹೊಂದಿದ್ದೇವೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

‘ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಸಾರ್ವಜನಿಕ ಸಾರಿಗೆ ಹಾಗೂ ಬ್ಯಾಟರಿಗಳ ತಯಾರಿಕೆಗೆಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.

ಸುಸ್ಥಿರ ಚಲನಶೀಲತೆ ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ದ್ವಿಚಕ್ರ, ತ್ರಿಚಕ್ರ, ಬಸ್‌ಗಳ ಶೇ 80ರಷ್ಟು ಬಿಡಿಭಾಗಗಳ ದೇಶಿ ತಯಾರಿಕೆಗೆ ಗಮನ ನೀಡಬೇಕು ಎಂದಿದ್ದಾರೆ.

‘ಸ್ಥಳೀಯವಾಗಿ ಬ್ಯಾಟರಿ ತಯಾರಿಕೆಗೆ ಉತ್ತೇಜನ ನೀಡ ಬೇಕಿದೆ.ವಿದ್ಯುತ್ ವಾಹನಗಳ ಒಟ್ಟಾರೆ ವೆಚ್ಚದಲ್ಲಿ ಶೇ 40ರಷ್ಟು ಬ್ಯಾಟರಿಗೆ ತಗಲುತ್ತದೆ. ಹೀಗಾಗಿದೇಶದಲ್ಲಿ ಬ್ಯಾಟರಿ ತಯಾರಿಸುವವರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳು ತೆರೆದುಕೊಳ್ಳಲಿವೆ.

‘ಪರಿಸರ ಸ್ನೇಹಿ ಸಾರಿಗೆ ಬಳಕೆಯಿಂದ ದೇಶವು ಕಚ್ಚಾ ತೈಲದ ಆಮದಿನ ಮೇಲೆ ಮಾಡುವ ವೆಚ್ಚ ಕಡಿಮೆಯಾಗಲಿದೆ. ಇದರಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವೂ ತಗ್ಗಲಿದೆ’ ಎಂದು ಕಾಂತ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.