ಶುಕ್ರವಾರ, ಡಿಸೆಂಬರ್ 3, 2021
24 °C

ನವದೆಹಲಿ: ಎನ್‌ಎಂಡಿಸಿಗೆ 5–ಸ್ಟಾರ್‌ ಶ್ರೇಯಾಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ದೇಶದ ಅತಿದೊಡ್ಡ ಕಂಪನಿ ಆಗಿರುವ ಎನ್‌ಎಂಡಿಸಿ, ಮೂರು ವರ್ಷಗಳಲ್ಲಿ ಒಟ್ಟಾರೆ ಒಂಭತ್ತು ‘5–ಸ್ಟಾರ್‌ ಶ್ರೇಯಾಂಕ’ಗಳನ್ನು ಪಡೆದುಕೊಂಡಿದೆ.

ಗಣಿ ಮತ್ತು ಖನಿಜಕ್ಕೆ ಸಂಬಂಧಿಸಿದ ಐದನೇ ರಾಷ್ಟ್ರೀಯ ಸಮಾವೇಶದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಎನ್‌ಎಂಡಿಸಿ ಅಧ್ಯಕ್ಷ ದಿಲೀಪ್‌ ಕುಮಾರ್‌ ಮೊಹಂತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

‘ದೇಶದ ಗಣಿ ಉದ್ಯಮದಲ್ಲಿ ಎನ್‌ಎಂಡಿಸಿ ಪ್ರಮುಖ ಪಾಲುದಾರ ಆಗಿದ್ದು, ಇಂಧನ ದಕ್ಷತೆ ಮತ್ತು ಸ್ಥಿರತೆಯಿಂದ ಕೂಡಿದ ಉತ್ಪಾದನಾ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸುವುದು ನಮ್ಮ ಜವಾಬ್ದಾರಿ. 5–ಸ್ಟಾರ್‌ ಶ್ರೇಯಾಂಕವು ಪರಿಸರ ಸಂರಕ್ಷಣೆಯಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ’ ಎಂದು ಮೊಹಂತಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು