ನವದೆಹಲಿ: ‘ಅದಾನಿ ಸಮೂಹದಲ್ಲಿ 11 ಕಂಪನಿಗಳಿವೆ. ಈ ಪೈಕಿ ಅದಾನಿ ಗ್ರೀನ್ ಎನರ್ಜಿ ಕಂಪನಿ (ಎಜಿಇಎಲ್) ಮೇಲಷ್ಟೇ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಆಡಳಿತ ಮಂಡಳಿಯಲ್ಲಿ ಚರ್ಚಿಸಿದ ಬಳಿಕ ಲಂಚ ಪ್ರಕರಣದ ಬಗ್ಗೆ ಸವಿವರವಾಗಿ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಅದಾನಿ ಸಮೂಹದ ಮುಖ್ಯ ಹಣಕಾಸು (ಸಿಎಫ್ಒ) ಅಧಿಕಾರಿ ಜುಗೇಶಿಂದರ್ ರಾಬಿ ಸಿಂಗ್ ತಿಳಿಸಿದ್ದಾರೆ.

‘ಲಂಚ ಪ್ರಕರಣ ಕುರಿತಂತೆ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿಲ್ಲದ ವಿಷಯಗಳು ಹೆಡ್ಲೈನ್ ರೂಪ ಪಡೆಯುತ್ತಿವೆ. ಪ್ರಕರಣ ಕುರಿತು ಅಮೆರಿಕದ ಕೋರ್ಟ್ನಲ್ಲಿ ನಮ್ಮ ಅಭಿಪ್ರಾಯ ಮಂಡಿಸಿದ ಬಳಿಕ ಇದರ ಬಗ್ಗೆ ಸ್ಪಷ್ಟನೆ ನೀಡುತ್ತೇವೆ’ ಎಂದು ‘ಎಕ್ಸ್’ನಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ದೋಷಾರೋಪ ಪಟ್ಟಿ ಆಧರಿಸಿ ಯಾವುದೇ ನ್ಯಾಯಾಲಯವು ತೀರ್ಪು ನೀಡಲು ಸಾಧ್ಯವಿಲ್ಲ. ಯಾವುದೇ, ಅಪರಾಧ ಪ್ರಕರಣದಲ್ಲಿ ಆರೋಪಿಯು ತಪ್ಪಿತಸ್ಥ ಎಂದು ಸಾಬೀತು ಆಗುವವರೆಗೂ ಆತನನ್ನು ನಿರಪರಾಧಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

‘ಅದಾನಿ ಗ್ರೀನ್ ಎನರ್ಜಿ ಕಂಪನಿಯು ಮಾಡಿಕೊಂಡಿರುವ ಒಪ್ಪಂದಗಳ ಪೈಕಿ ಶೇ 10ರಷ್ಟು ಒಪ್ಪಂದಕ್ಕಷ್ಟೇ ಈ ಆರೋಪ ಪಟ್ಟಿ ಸೀಮಿತವಾಗಿದೆ. ಸೂಕ್ತ ವೇದಿಕೆಯಲ್ಲಿ ಪ್ರಕರಣದ ಬಗ್ಗೆ ನಿಖರ ಹಾಗೂ ಸಮಗ್ರವಾಗಿ ವಿವರಣೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಜುಗೇಶಿಂದರ್ ಅವರು ಅದಾನಿ ಸಮೂಹದ ಮೊದಲ ಸ್ತರದಲ್ಲಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ಕಳೆದ ವರ್ಷದ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ನಿಂದ ಅದಾನಿ ಸಮೂಹದ ವಿರುದ್ಧ ವರದಿ ಪ್ರಕಟವಾಗಿತ್ತು. ಆ ವೇಳೆ ಸಿಎಫ್ಒ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ ಸಮೂಹವನ್ನು ಸಮರ್ಥಿಸಿಕೊಂಡಿದ್ದರು.

ಈಗ ಗೌತಮ್ ಅದಾನಿ ವಿರುದ್ಧ ಕೇಳಿಬಂದಿರುವ ಲಂಚ ಆರೋಪದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
.ಸಂಪಾದಕೀಯ: ಅದಾನಿ ವಿರುದ್ಧದ ಆರೋಪ; ಸತ್ಯ ಹೊರಬರಲು ಕ್ರಮ ಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.