ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಎನ್‌ಪಿಎ: ₹ 7.27 ಲಕ್ಷ ಕೋಟಿ: ಲೋಕಸಭೆಗೆ ಸರ್ಕಾರ ಮಾಹಿತಿ

Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು 2019ರ ಸೆಪ್ಟೆಂಬರ್‌ ಅಂತ್ಯಕ್ಕೆ ₹ 7.27 ಲಕ್ಷ ಕೋಟಿಗಳಷ್ಟಿದೆ.

ಹಣಕಾಸು ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

‘ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳಲ್ಲಿ 2019–20ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹ 1.13 ಲಕ್ಷ ಕೋಟಿ ಮೊತ್ತದ ವಂಚನೆ ಪ್ರಕರಣಗಳು ನಡೆದಿವೆ. ಬ್ಯಾಂಕ್‌ಗಳ ಪುನರ್ಧನ, ಸುಧಾರಣಾ ಕ್ರಮಗಳ ಫಲವಾಗಿ ‘ಎನ್‌ಪಿಎ’ ಪ್ರಮಾಣವು ₹ 1.68 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ’ ಎಂದು ತಿಳಿಸಿದ್ದಾರೆ.

ಆಧಾರ್‌ಗೆ ಪ್ಯಾನ್‌ ಜೋಡಣೆ: ಈ ವರ್ಷದ ಜನವರಿ 27ರವರೆಗೆ ಆಧಾರ್‌ ಜತೆಗೆ 30 ಕೋಟಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸಲಾಗಿದೆ.

‘ಪ್ಯಾನ್‌ ಮತ್ತು ಆಧಾರ್ ಜೋಡಣೆಯ ಗಡುವನ್ನು ಈ ವರ್ಷದ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ. 17 ಕೋಟಿ ಪ್ಯಾನ್‌ಗಳು ಇನ್ನೂ ಆಧಾರ್‌ ಜತೆ ಜೋಡಣೆಯಾಗಬೇಕಾಗಿದೆ. ಶೇ 85ರಷ್ಟು ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳಿಗೆ ‘ಆಧಾರ್‌’ ಜೋಡಣೆಯಾಗಿದೆ' ಎಂದು ಠಾಕೂರ್‌ ತಿಳಿಸಿದ್ದಾರೆ.

ಆದಾಯ ತೆರಿಗೆ ಕಾಯ್ದೆಯಡಿ, ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಮಾರಾಟ ಅಥವಾ ಖರೀದಿ ಸಂದರ್ಭದಲ್ಲಿ ಪ್ಯಾನ್‌ ನಮೂದಿಸುವುದು ಕಡ್ಡಾಯವಾಗಿದೆ.

* 30 ಕೋಟಿ: ಇದುವರೆಗೆ ಆಧಾರ್‌ ಜತೆ ಜೋಡಣೆಯಾಗಿರುವ ಪ್ಯಾನ್‌ ಸಂಖ್ಯೆ

* 17 ಕೋಟಿ: ಆಧಾರ್‌ಗೆ ಜೋಡಣೆಯಾಗಬೇಕಾಗಿರುವ ‘ಪ್ಯಾನ್‌’ಗಳ ಸಂಖ್ಯೆ

* 59.15 ಕೋಟಿ: ಬ್ಯಾಂಕ್‌ಗಳು ವಿತರಿಸಿರುವ ರೂಪೆ ಕಾರ್ಡ್‌ಗಳ ಸಂಖ್ಯೆ

* 85 %: ಆಧಾರ್‌ ಜೋಡಣೆಯಾಗಿರುವ ಚಾಲ್ತಿ ಮತ್ತು ಉಳಿತಾಯ ಖಾತೆ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT