ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 22ರಷ್ಟು ತಗ್ಗಲಿದೆ ಕಚೇರಿ ಸ್ಥಳದ ಗುತ್ತಿಗೆ

2023ನೇ ಕ್ಯಾಲೆಂಡರ್‌ ವರ್ಷಕ್ಕೆ ಕ್ರೆಡಾಯ್‌–ಸಿಆರ್‌ಇ–ಮ್ಯಾಟ್ರಿಕ್‌ ಜಂಟಿ ವರದಿ
Published 9 ಡಿಸೆಂಬರ್ 2023, 15:49 IST
Last Updated 9 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರನ್ನೂ ಒಳಗೊಂಡು ಪ್ರಮುಖ ಆರು ನಗರಗಳಲ್ಲಿ ಕಚೇರಿ ಸ್ಥಳವನ್ನು ಗುತ್ತಿಗೆಯ ಆಧಾರದಲ್ಲಿ ನೀಡುವುದು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಶೇ 18–22 ಆಗುವ ಅಂದಾಜು ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ.

ಕಚೇರಿ ಸ್ಥಳಕ್ಕೆ ಇರುವ ಬೇಡಿಕೆಯ ಕುರಿತು ಕ್ರೆಡಾಯ್‌ ಮತ್ತು ದತ್ತಾಂಶ ವಿಶ್ಲೇಷಕ ಕಂಪನಿ ಸಿಆರ್‌ಇ–ಮ್ಯಾಟ್ರಿಕ್‌ ಜಂಟಿ ವರದಿ ಬಿಡುಗಡೆ ಮಾಡಿವೆ. ಅದರಂತೆ, ಎ–ಶ್ರೇಣಿಯ ಪ್ರಿಮಿಯಂ ಕಚೇರಿ ಸ್ಥಳದ ಗುತ್ತಿಗೆ ನೀಡುವುದು 2023ನೇ ಕ್ಯಾಲೆಂಡರ್ ವರ್ಷದಲ್ಲಿ 5.5 ಕೋಟಿಯಿಂದ 5.7 ಕೋಟಿ ಚದರ ಅಡಿಯಷ್ಟು ಇರುವ ಅಂದಾಜು ಮಾಡಲಾಗಿದೆ.

2022ನೇ ಕ್ಯಾಲೆಂಡರ್ ವರ್ಷದಲ್ಲಿ 7 ಕೋಟಿ ಚದರ ಅಡಿಯಷ್ಟು ಇತ್ತು. ಬೆಂಗಳೂರು, ದೆಹಲಿ–ಎನ್‌ಸಿಆರ್‌, ಮುಂಬೈ ಮೆಟ್ರೊಪಾಲಿಟನ್‌ ರೀಜನ್‌, ಪುಣೆ, ಚೆನ್ನೈ ಮತ್ತು ಹೈದರಾಬಾದ್‌ ನಗರಗಳ ಸಂಬಂಧಿಸಿದ ಮಾಹಿತಿಗಳನ್ನು ಈ ವರದಿ ಒಳಗೊಂಡಿದೆ.

ಕಂಪನಿಗಳು ವಹಿವಾಟು ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳುವುದನ್ನು ತಡ ಮಾಡುತ್ತಿವೆ. ಇದಲ್ಲದೆ, ಕಳೆದ ವರ್ಷ ಗರಿಷ್ಠ ಮಟ್ಟದ ಬೇಡಿಕೆ ಇತ್ತು. ಈ ಕಾರಣದಿಂದಲೂ ಕಚೇರಿ ಸ್ಥಳಾವಕಾಶದ ಗುತ್ತಿಗೆ ನೀಡುವ ಪ್ರಮಾಣದಲ್ಲಿ ಇಳಿಕೆ ಕಂಡುಬರಲಿದೆ ಎಂದು ವರದಿ ತಿಳಿಸಿದೆ.

ಈ ಆರು ನಗರಗಳಲ್ಲಿ 2023ರ ಜನವರಿ–ಸೆಪ್ಟೆಂಬರ್ ಅವಧಿಯಲ್ಲಿ ಕಚೇರಿ ಸ್ಥಳದ ಗುತ್ತಿಗೆ ಚಟುವಟಿಕೆಯು 4.18 ಕೋಟಿ ಚದರ ಅಡಿಗಳಷ್ಟು ಆಗಿದೆ. ಕಚೇರಿ ಸ್ಥಳದ ಒಟ್ಟು ಬೇಡಿಕೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಯೇತರ, ಬಿಎಫ್‌ಎಸ್‌ಐ ಮತ್ತು ಕೊ–ವರ್ಕಿಂಗ್‌ ವಲಯಗಳ ಪಾಲು ಶೇ 66ಕ್ಕೂ ಹೆಚ್ಚಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT