ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ನಗರಗಳಲ್ಲಿ ಕಚೇರಿ ಸ್ಥಳಾವಕಾಶದ ಗುತ್ತಿಗೆ ಇಳಿಕೆ: ಜೆಎಲ್ಎಲ್‌ ಇಂಡಿಯಾ

Last Updated 5 ಅಕ್ಟೋಬರ್ 2020, 14:21 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಸೇರಿದಂತೆದೇಶದ ಪ್ರಮುಖ ಏಳು ನಗರಗಳಲ್ಲಿ ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಮಾಣವುಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಶೇಕಡ 50ರಷ್ಟು ಇಳಿಕೆಯಾಗಿದೆ.

2019ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ 1.09 ಕೋಟಿ ಚದರ ಅಡಿಗಳಷ್ಟು ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಇದು 2020ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ 54 ಲಕ್ಷ ಚದರ ಅಡಿಗಳಿಗೆ ಇಳಿಕೆಯಾಗಿದೆಎಂದು ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್ ಇಂಡಿಯಾ ತಿಳಿಸಿದೆ.

ದೆಹಲಿ ರಾಜಧಾನಿ ಪ್ರದೇಶ, ಮುಂಬೈ, ಕೋಲ್ಕತ್ತ, ಚೆನ್ನೈ, ಪುಣೆ, ಹೈದರಾಬಾದ್‌ ಮತ್ತು ಬೆಂಗಳೂರು ನಗರಗಳ ಅಂಕಿ–ಅಂಶಗಳನ್ನು ಆಧರಿಸಿ ಈ ಮಾಹಿತಿಯನ್ನು ಅದು ನೀಡಿದೆ.

ಜನವರಿ–ಸೆಪ್ಟೆಂಬರ್‌ ಅವಧಿಯನ್ನು ಪರಿಗಣಿಸಿದರೂ ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು 3.27 ಕೋಟಿ ಚದರ ಅಡಿಗಳಿಂದ 1.73 ಕೋಟಿ ಚದರ ಅಡಿಗಳಿಗೆ, ಅಂದರೆ ಶೇ 47ರಷ್ಟು, ಇಳಿಕೆಯಾಗಿದೆ.

ಮುಂಚೂಣಿಯಲ್ಲಿ ಬೆಂಗಳೂರು: ಕಚೇರಿ ಸ್ಥಳವನ್ನು ಗುತ್ತಿಗೆ ನೀಡುವ ವಿಷಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇಲ್ಲಿ 27 ಲಕ್ಷ ಚದರ ಅಡಿಗಳಷ್ಟು ಕಚೇರಿ ಸ್ಥಳವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. 15.4 ಲಕ್ಷ ಚದರ ಅಡಿಗಳನ್ನು ನೀಡುವ ಮೂಲಕ ಹೈದರಾಬಾದ್‌ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕಚೇರಿ ಬಾಡಿಗೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಉಳಿದ ನಗರಗಳಲ್ಲಿ ಬಾಡಿಗೆ ಸ್ಥಿರವಾಗಿದೆ ಎಂದು ಜೆಎಲ್‌ಎಲ್‌ ಇಂಡಿಯಾ ಹೇಳಿದೆ.

ಕೊರೊನಾ ವೈರಾಣು ಹರಡುತ್ತಿರುವುದರಿಂದ ಕಂಪನಿಗಳು ತಮ್ಮ ವಹಿವಾಟು ವಿಸ್ತರಿಸುವ ಯೋಜನೆಗಳನ್ನು ಸದ್ಯಕ್ಕೆ ತಡೆಹಿಡಿದಿವೆ. ಇದರ ಜತೆಗೆ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದು ಸಹ ಕಚೇರಿ ಸ್ಥಳಕ್ಕಾಗಿನ ಬೇಡಿಕೆ ಇಳಿಯುವಂತೆ ಮಾಡುತ್ತಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT