ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೇಟಿಎಂ ಷೇರಿನ ಮೌಲ್ಯ ಶೇ 8ರಷ್ಟು ಏರಿಕೆ

Published 8 ಜುಲೈ 2024, 14:01 IST
Last Updated 8 ಜುಲೈ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 8ರಷ್ಟು ಏರಿಕೆ ಆಗಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹472.05 ಮತ್ತು ₹472.95ಕ್ಕೆ ಸ್ಥಿರಗೊಂಡಿತು. ಷೇರಿನ ಮೌಲ್ಯ ಏರಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹2,279 ಕೋಟಿ ಸೇರ್ಪಡೆಯಾಗಿದ್ದು, ಕಂಪನಿಯ ಒಟ್ಟು ಎಂ–ಕ್ಯಾಪ್‌ ₹30,022 ಕೋಟಿಗೆ ಮುಟ್ಟಿದೆ.

ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ ಕಂಪನಿಯನ್ನು ₹8.34 ಲಕ್ಷ ಕೋಟಿಯನ್ನಾಗಿಸುವುದು (100 ಬಿಲಿಯನ್‌ ಡಾಲರ್‌) ಗುರಿಯಾಗಿದೆ ಎಂದು ಶನಿವಾರ ಹೇಳಿದ್ದರು. ಇದರಿಂದ ಷೇರಿನ ಮೌಲ್ಯ ಏರಿಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT