ಐಟಿ ರಿಟರ್ನ್‌ ಸಲ್ಲಿಸಿರುವವರು ನೆಮ್ಮದಿಯಿಂದ ಇರಿ: ತೆರಿಗೆ ಮಂಡಳಿ ಅಧ್ಯಕ್ಷ

7

ಐಟಿ ರಿಟರ್ನ್‌ ಸಲ್ಲಿಸಿರುವವರು ನೆಮ್ಮದಿಯಿಂದ ಇರಿ: ತೆರಿಗೆ ಮಂಡಳಿ ಅಧ್ಯಕ್ಷ

Published:
Updated:

ನವದೆಹಲಿ: ‘ಆದಾಯ ತೆರಿಗೆ ಪಾವತಿದಾರರಲ್ಲಿ ಸಂಪೂರ್ಣ ವಿಶ್ವಾಸವಿದೆ. ವಂಚಕರು ತೆರಿಗೆ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗುವುದು’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್‌ ಚಂದ್ರ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗರಿಷ್ಠ ಮೊತ್ತದ ತೆರಿಗೆ ವಂಚನೆ ಪ್ರಕರಣಗಳನ್ನು ಮಾತ್ರ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

‘ತೆರಿಗೆದಾರರ ಸಂಖ್ಯೆ ಹೆಚ್ಚಿಸಲಾಗಿದೆ. 2017–18ನೇ ಅಂದಾಜು ವರ್ಷದಲ್ಲಿ ಸಲ್ಲಿಕೆಯಾಗಿರುವ ಒಟ್ಟಾರೆ ಆದಾಯ ತೆರಿಗೆ ಲೆಕ್ಕಪತ್ರದಲ್ಲಿ (ಐ.ಟಿ ರಿಟರ್ನ್‌) ಶೇ 0.35 ರಷ್ಟನ್ನು (6.86 ಕೋಟಿ) ಮಾತ್ರವೇ ಪರಿಶೀಲನೆಗೆ ಒಳಪಡಿಸಲಾಗುವುದು. ಇನ್ನುಳಿದ ಶೇ 99.65 ರಷ್ಟು ರಿಟರ್ನ್‌ ಸಲ್ಲಿಸಿರುವವರು ನೆಮ್ಮದಿಯಿಂದ ಇರಬಹುದು’ ಎಂದು ಹೇಳಿದ್ದಾರೆ.

‘ದೇಶದಿಂದ ದೇಶಕ್ಕೆ ಅಂತರ ಹೆಚ್ಚಿರುವುದರಿಂದ ಹಣ ಬಚ್ಚಿಟ್ಟರೆ ಯಾರಿಗೂ ತಿಳಿಯುವುದಿಲ್ಲ ಎಂದು ವಂಚಕರು ಭಾವಿಸುತ್ತಿದ್ದಾರೆ. ಆದರೆ ದೇಶಗಳ ಮಧ್ಯೆ ಆರ್ಥಿಕ ಗಡಿ ಬಹಳಷ್ಟು ಹತ್ತಿರದಲ್ಲಿ ಇರಲಿದೆ. ನೀವು ಯಾವುದೇ ‘ತೆರಿಗೆದಾರರ ಸ್ವರ್ಗ’ ಅಥವಾ ವಿದೇಶಕ್ಕೆ ಹಣ ಕಳುಹಿಸಿ. ನಾವು ಬಹಳಷ್ಟು ದೇಶಗಳೊಂದಿಗೆ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ಹೊಂದಿದ್ದೇವೆ. ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ’ ಎಂದರು.

ಈ ಮೊದಲು ಸಲ್ಲಿಕೆಯಾಗುತ್ತಿದ್ದ ಒಟ್ಟಾರೆ ಐ.ಟಿ ರಿಟರ್ನ್‌ಗಳಲ್ಲಿ ಶೇ 1 ರಷ್ಟನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತಿತ್ತು. ಆದರೆ, ಈಗ ಅದನ್ನು ಶೇ 0.35ಕ್ಕೆ ತಗ್ಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !