ಇಂದು ಇಂದಿಗೆ, ನಾಳೆ ನಾಳೆಗೆ; ನಿವೃತ್ತಿ ಬದುಕಿಗೆ ಉಳಿಸುತ್ತಿರುವವರು ಶೇ 33 ಮಾತ್ರ

7

ಇಂದು ಇಂದಿಗೆ, ನಾಳೆ ನಾಳೆಗೆ; ನಿವೃತ್ತಿ ಬದುಕಿಗೆ ಉಳಿಸುತ್ತಿರುವವರು ಶೇ 33 ಮಾತ್ರ

Published:
Updated:
Deccan Herald

ಮುಂಬೈ: ’ಇಂದು ಇಂದಿಗೆ, ನಾಳೆ ನಾಳೆಗೆ..’ ಎಂಬುದನ್ನು ಇಂದಿನ ಜನಾಂಗ ಬಲವಾಗಿ ನೆಚ್ಚಿಕೊಂಡಿದೆ. ಹಲವಾರು ವಿಷಯಗಳಲ್ಲಿ ಈ ತತ್ವ ಪ್ರಸ್ತುತವೆನಿಸಿದರೂ ನಿವೃತ್ತಿ ದಿನಗಳ ವಿಚಾರದಲ್ಲಿ ದೊಡ್ಡ ಪೆಟ್ಟು ನೀಡುತ್ತದೆ. ವರದಿಯೊಂದರ ಪ್ರಕಾರ, ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡುತ್ತಿರುವವರ ಪ್ರಮಾಣ ಕೇವಲ ಶೇ 33.

ನಿವೃತ್ತಿ ಸಮಯದಲ್ಲಿ ಅಗತ್ಯವಿರುವ ಹಣದ ಬಗ್ಗೆ ಅರಿವಿನ ಕೊರತೆ ಹಾಗೂ ತಕ್ಷಣದ ಆದ್ಯತೆಗಳ ಪೂರೈಕೆಗೆ ಗಮನ ಹೆಚ್ಚಿದೆ. ಇದರಿಂದಾಗಿ ಮುಂದಿನ ದಿನಗಳಿಗಾಗಿ ಉಳಿತಾಯ ಮಾಡುವ ಪ್ರಮಾಣ ಅತಿ ಕಡಿಮೆ ಇರುವುದಾಗಿ ಎಚ್‌ಎಸ್‌ಬಿಸಿಯ ’ಫೂಚರ್‌ ಆಫ್‌ ರಿಟೈರ್ಮೆಂಟ್‌: ಬ್ರಿಡ್ಜಿಂಗ್‌ ದಿ ಗ್ಯಾಪ್‌’ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಸ್ತುತ ದುಡಿಮೆಯಲ್ಲಿ ತೊಡಗಿರುವವರ ಪೈಕಿ ಕೇವಲ ಶೇ 19 ಮಂದಿ ಮಾತ್ರ ಭಷಿಷ್ಯದ ದಿನಗಳಿಗಾಗಿ ಉಳಿತಾಯ ಮಾಡುತ್ತಿದ್ದಾರೆ. ಇನ್ನು ಉಳಿದವರಲ್ಲಿ ಶೇ 56ರಷ್ಟು ಜನ ದಿನ ನಿತ್ಯದ ಬದುಕಿಗೆ ಆಗುಷ್ಟು ಆರ್ಥಿಕ ದೃಢತೆ ಹೊಂದಿದ್ದಾರೆ. ಕೆಲವರು ಕಡಿಮೆ ಅವಧಿಯ ಗುರಿಗಳ ಸಾಧನೆಗಾಗಿ ಉಳಿತಾಯ ಮಾಡುತ್ತಿದ್ದಾರೆ. 

ಭಾರತ, ಆಸ್ಟೇಲಿಯಾ, ಚೀನಾ, ಕೆನಾಡ, ಅರ್ಜೆಂಟಿನಾ, ಮೆಲೇಷ್ಯಾ, ಮೆಕ್ಸಿಕೊ, ಸಿಂಗಾಪುರ, ತೈವಾನ್‌, ಫ್ರಾನ್ಸ್‌, ಹಾಂಗ್‌ಕಾಂಗ್‌, ಟರ್ಕಿ, ಅರಬ್‌ ಒಕ್ಕೂಟ, ಇಂಗ್ಲೆಂಡ್‌ ಹಾಗೂ ಅಮೆರಿಕದ 16 ಸಾವಿರ ಜನರನ್ನು ಈ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದೆ. ಆನ್‌ಲೈನ್‌ ಮೂಲಕವೇ ಇಪ್ಸೋಸ್‌ ಜನರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ರೂಪಿಸಿದೆ. 

ನಿವೃತ್ತಿ ಜೀವನ ಹಲವರ ಪಾಲಿಗೆ ಹೆಚ್ಚಿನ ಸಮಯದವರೆಗೂ ಸಾಗಬಹುದು. ಆದರೆ, ವ್ಯಕ್ತಿಯೊಬ್ಬನ ಅವಶ್ಯಕತೆ 65ನೇ ವರ್ಷಕ್ಕಿಂತ 75ರಲ್ಲಿ ವ್ಯತ್ಯಾಸವಾಗುತ್ತದೆ ಹಾಗೂ 85ರಲ್ಲಿ ಇನ್ನೂ ಬೇರೆಯಾಗಿರುತ್ತದೆ ಎನ್ನುತ್ತಾರೆ ಎಚ್‌ಎಸ್‌ಬಿಸಿ ವೆಲ್ತ್‌ ಮ್ಯಾನೇಜ್‌ಮೆಂಟ್‌ ಭಾರತ ವಲಯದ ಮುಖ್ಯಸ್ಥ ರಾಮಕೃಷ್ಣನ್‌. 

ನಾಳೆಗೆ ಉಳಿಸುವುದಕ್ಕಿಂತಲೂ ಇವತ್ತಿನ ದಿನವನ್ನು ಸಂತೋಷದಿಂದ ಕಳೆಯಲು ಬಯಸುತ್ತಿರುವುದಾಗಿ ಶೇ 45 ಜನರು ಅಭಿಪ್ರಾಯ ಪಟ್ಟಿದ್ದಾರೆ. ವೃತ್ತಿನಿರತರಲ್ಲಿ ಅನೇಕರು ಸಾಮರ್ಥ್ಯ ಇರುವವರೆಗೂ ದುಡಿಯುವ ಯೋಜನೆ ಹೊಂದಿದ್ದರೆ, ಇನ್ನೂ ಕೆಲವರು ಸ್ವಂತ ವ್ಯಾಪಾರ–ವಹಿವಾಟು ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !