ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಿನಲ್ಲಿ (ಏಪ್ರಿಲ್–ಸೆಪ್ಟೆಂಬರ್) ದೇಶಿ ಪ್ರಯಾಣಿಕ ವಾಹನ ಮಾರಾಟ ಶೇ 6.88ರಷ್ಟು ಹೆಚ್ಚಾಗಿದೆ.

ಹಿಂದಿನ ಹಣಕಾಸು ವರ್ಷದ 6 ತಿಂಗಳಿನಲ್ಲಿ 16.32 ಲಕ್ಷ ವಾಹನಗಳು ಮಾರಾಟವಾಗಿದ್ದವು. ಈ ಬಾರಿ 17.44 ಲಕ್ಷಕ್ಕೆ ಏರಿಕೆಯಾಗಿದೆ.

ದೇಶಿ ಕಾರು ಮಾರಾಟವು ಶೇ 6.8ರಷ್ಟು ಪ್ರಗತಿ ಕಂಡಿದ್ದು 11.69 ಲಕ್ಷ ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಮಾಹಿತಿ ನೀಡಿದೆ.

ದ್ವಿಚಕ್ರ ವಾಹನ ಮಾರಾಟ ಶೇ 10.07ರಷ್ಟು ವೃದ್ಧಿಯಾಗಿದ್ದು 11.56 ಕೋಟಿಗೆ ಏರಿಕೆಯಾಗಿದೆ. ವಾಣಿಜ್ಯ ವಾಹನ ಮಾರಾಟ ಶೇ 37.82ರಷ್ಟು ಹೆಚ್ಚಾಗಿದ್ದು 4.87 ಲಕ್ಷಕ್ಕೆ ತಲುಪಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ:ಇಂಧನ ದರ ಏರಿಕೆ, ವಿಮೆ ಕಂತು ಹೆಚ್ಚಳ ಹಾಗೂ ವಾಹನಗಳ ಬೆಲೆ ಏರಿಕೆಯಿಂದಾಗಿ ಸೆಪ್ಟೆಂಬರ್ನಲ್ಲಿಪ್ರಯಾಣಿಕವಾಹನ ಮಾರಾಟ ಮಂದಗತಿಯ ಬೆಳವಣಿಗೆ ಸಾಧಿಸಿದೆ.

ವಾಣಿಜ್ಯ ವಾಹನಗಳ ಮಾರಾಟ ಹೆಚ್ಚಾಗುತ್ತಿದೆ. ದ್ವಿಚಕ್ರವಾಹನ ಮಾರಾಟದಲ್ಲಿ ಇಳಿಕೆಯಾಗಿದೆ.ದೇಶದಲ್ಲಿ ಮಾರಾಟವಾಗುವ ಕಾರುಗಳಲ್ಲಿ ಅರ್ಧದಷ್ಟನ್ನು ತಯಾರಿಸುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರಾಟ 1.63 ಲಕ್ಷದಿಂದ 1.62 ಲಕ್ಷಕ್ಕೆ ಅಲ್ಪ ಇಳಿಕೆ ಕಂಡಿದೆ.ದೇಶಿ ಮಾರಾಟ ಕೇವಲಶೇ 1.4 ರಷ್ಟು ಏರಿಕೆಯಾಗಿದೆ.

ಆಲ್ಟೊ, ವ್ಯಾಗನ್ಆರ್ ಒಳಗೊಂಡು ಸಣ್ಣ ಗಾತ್ರದ ಕಾರುಗಳ ಮಾರಾಟ ಶೇ 9.1ರಷ್ಟು ಇಳಿಕೆಯಾಗಿದೆ.ಹುಂಡೈ ಮೋಟರ್ ಇಂಡಿಯಾದ ದೇಶಿ ಮಾರಾಟ ಶೇ 4.5ರಷ್ಟು ಇಳಿಕೆಯಾಗಿದೆ. ಟಾಟಾ ಮೋಟರ್ಸ್ಶೇ 7ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮಾರಾಟ ಶೇ 16ರಷ್ಟು ಇಳಿಕೆಯಾಗಿದೆ.

ಆರು ತಿಂಗಳಿನಲ್ಲಿ ಪೆಟ್ರೋಲ್ ದರ ಶೇ 14ರಷ್ಟು ಮತ್ತು ಡೀಸೆಲ್ ದರ ಶೇ 17ರಷ್ಟು ಹೆಚ್ಚಾಗಿವೆ. ಇದರಿಂದ ವಾಹನ ಚಾಲನೆ ವೆಚ್ಚದಲ್ಲಿ ಏರಿಕೆಯಾಗಿದೆ. ದೀರ್ಘಾವಧಿ ವಿಮೆ ಕಂತು ಹೆಚ್ಚಳವಾಗಿರುವುದು ಸಹ ಹೊರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.