ಶನಿವಾರ, ಜೂನ್ 19, 2021
23 °C

ಭೋಪಾಲ್‌, ಇಂದೋರ್‌ನಲ್ಲಿಯೂ ₹ 100ರ ಗಡಿ ದಾಟಿದ ಪೆಟ್ರೋಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಬುಧವಾರವೂ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿದೆ. ಇದರಿಂದಾಗಿ ಭೋಪಾಲ್‌ ಮತ್ತು ಇಂದೋರ್‌ ನಗರಗಳಲ್ಲಿಯೂ ಪೆಟ್ರೋಲ್‌ ದರ ₹ 100ರ ಗಡಿ ದಾಟಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಗರಿಷ್ಠ ಮಟ್ಟದಲ್ಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ಪ್ರದೇಶಗಳಲ್ಲಿ ಪೆಟ್ರೋಲ್‌ ದರ ₹ 100ರ ಗಡಿ ದಾಟಿದೆ.

ಭೋಪಾಲ್‌ನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 100.08 ಇದ್ದರೆ, ಇಂದೋರ್‌ನಲ್ಲಿ ₹100.16ರಷ್ಟಿದೆ.

ಮೇ 4ರಿಂದ  ಇದುವರೆಗೆ ಒಟ್ಟು ಏಳು ಬಾರಿ ಇಂಧನ ದರ ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೋಲ್‌ ದರ ಲೀಟರಿಗೆ ₹ 1.66 ಮತ್ತು ಡೀಸೆಲ್‌ ದರ ₹1.88 ರಷ್ಟು ಹೆಚ್ಚಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 92.05ರಷ್ಟು ಮತ್ತು ಡೀಸೆಲ್‌ ದರ ₹ 82.61ರಷ್ಟಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 95.11 ಮತ್ತು ಡೀಸೆಲ್ ದರ ₹ 87.57ರಷ್ಟಕ್ಕೆ ತಲುಪಿದೆ.

ಇಂಧನ ಬೇಡಿಕೆ ಇಳಿಕೆ: ಇಂಧನ ಬೇಡಿಕೆಯು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 9.38ರಷ್ಟು ಇಳಿಕೆ ಆಗಿದೆ.

ಮಾರ್ಚ್‌ನಲ್ಲಿ 1.87 ಕೋಟಿ ಟನ್‌ಗಳಷ್ಟು ಇಂಧನ ಮಾರಾಟ ಆಗಿತ್ತು. ಏಪ್ರಿಲ್‌ನಲ್ಲಿ 1.70 ಕೋಟಿ ಟನ್‌ಗಳಿಗೆ ಇಳಿಕೆ ಆಗಿದೆ ಎನ್ನುವ ಮಾಹಿತಿಯು ಪೆಟ್ರೋಲಿಯಂ ಪ್ಲಾನಿಂಗ್‌ ಆ್ಯಂಡ್‌ ಅನಲಿಸಿಸ್‌ ಸೆಲ್‌ನಲ್ಲಿದೆ (ಪಿಪಿಎಸಿ).

ವಿಮಾನ ಇಂಧನ (ಎಟಿಎಫ್‌) ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 14ರಷ್ಟು ಇಳಿಕೆ ಆಗಿದೆ. ಎಲ್‌ಪಿಜಿ ಮಾರಾಟ ಶೇ 6.4ರಷ್ಟು ಇಳಿಕೆ ಆಗಿದೆ.

ಕೋವಿಡ್‌ ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ನಿರ್ಬಂಧಗಳು ಜಾರಿಯಾಗಿರುವುದರಿಂದ ಮೇ ತಿಂಗಳಿನಲ್ಲಿ ಇಂಧನ ಮಾರಾಟ ಇಳಿಕೆ ಕಾಣುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು