ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನದಲ್ಲಿ ಪೆಟ್ರೋಲ್‌ 93 ಪೈಸೆ, ಡೀಸೆಲ್‌ 96 ಪೈಸೆ ಹೆಚ್ಚಳ

Last Updated 11 ಫೆಬ್ರುವರಿ 2021, 13:28 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್, ಡೀಸೆಲ್‌ ದರ ನಾಲ್ಕು ದಿನಗಳಿಂದ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ದರ ಗುರುವಾರ 25 ಪೈಸೆ ಹೆಚ್ಚಾಗಿ ₹ 90.78ರಂತೆ ಹಾಗೂ ಡೀಸೆಲ್‌ ದರ 32 ಪೈಸೆ ಹೆಚ್ಚಾಗಿ ₹ 82.72ರಂತೆ ಮಾರಾಟವಾಗಿದೆ. ನಾಲ್ಕು ದಿನಗಳಲ್ಲಿ ಪೆಟ್ರೋಲ್‌ ದರ 93 ಪೈಸೆಯಷ್ಟು, ಡೀಸೆಲ್‌ ದರ 96 ಪೈಸೆಯಷ್ಟು ಹೆಚ್ಚಾದಂತಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ 25 ಪೈಸೆ ಹೆಚ್ಚಾಗಿ ₹ 87.85ಕ್ಕೆ, ಡೀಸೆಲ್‌ ದರ 30 ಪೈಸೆ ಹೆಚ್ಚಾಗಿ ₹ 78.03ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ ₹ 94.36ಕ್ಕೆ ಹಾಗೂ ಡೀಸೆಲ್‌ ದರ ₹ 84.94ಕ್ಕೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT