ಪೆಟ್ರೋಲ್‌ ದರ 18 ದಿನಗಳಲ್ಲಿ ₹4 ಇಳಿಕೆ

7

ಪೆಟ್ರೋಲ್‌ ದರ 18 ದಿನಗಳಲ್ಲಿ ₹4 ಇಳಿಕೆ

Published:
Updated:

ನವದೆಹಲಿ: ದೇಶದಾದ್ಯಂತ ಇಂಧನ ದರಗಳು ಇಳಿಮುಖವಾಗಿವೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 18 ದಿನಗಳಲ್ಲಿ  ಪ್ರತಿ  ಲೀಟರ್‌ ಪೆಟ್ರೋಲ್‌ ದರ ₹4 ಮತ್ತು ಡೀಸೆಲ್‌ ದರ ₹2.33ರಷ್ಟು ಇಳಿಕೆ ಮಾಡಿವೆ.

ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 21 ಪೈಸೆ ಮತ್ತು ಡೀಸೆಲ್‌ ದರ 17 ಪೈಸೆ ಇಳಿಕೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್‌ ₹79.42 ಮತ್ತು ಡೀಸೆಲ್‌ ₹73.56ರಂತೆ ಮಾರಾಟವಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರಗಳನ್ನು ತಗ್ಗಿಸುತ್ತಿವೆ.

ನಗರ: ಪೆಟ್ರೋಲ್‌ – ಡೀಸೆಲ್‌ (ಪ್ರತಿ ಲೀಟರ್‌ಗೆ)

ಬೆಂಗಳೂರು: ₹79.42 – ₹ 73.56

ನವದೆಹಲಿ: ₹78.78 – ₹73.36

ಮುಂಬೈ: ₹82.28 – ₹76.88

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !