ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದು ವಾರದಿಂದ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಕಾಣುತ್ತಿವೆ. ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ದರ ಸರಾಸರಿ 48 ರಿಂದ 50 ಪೈಸೆ ಮತ್ತು ಡೀಸೆಲ್ ದರ ಸರಾಸರಿ 19 ರಿಂದ 20 ಪೈಸೆಗಳವರೆಗೆ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 55 ಪೈಸೆ ಕಡಿಮೆಯಾಗಿ, ₹74.51ಕ್ಕೆ ಇಳಿಕೆಯಾಗಿದೆ. ಡೀಸೆಲ್ ದರ 19 ಪೈಸೆ ಇಳಿಕೆ ಕಂಡು, ಒಂದು ಲೀಟರ್ಗೆ ₹ 68.44ಕ್ಕೆ ತಲುಪಿದೆ.ಸದ್ಯದ ದರ ಪರಿಷ್ಕರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ತೈಲ ಮಾರಾಟ ಕಂಪನಿಗಳು ನಿರಾಕರಿಸಿವೆ.