ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಎಫ್‌ಎಲ್‌ ಸ್ವಾಧೀನಕ್ಕೆ ಆರ್‌ಬಿಐ ಒಪ್ಪಿಗೆ: ಪಿರಾಮಲ್‌ ಗ್ರೂಪ್‌

Last Updated 18 ಫೆಬ್ರುವರಿ 2021, 13:40 IST
ಅಕ್ಷರ ಗಾತ್ರ

ನವದೆಹಲಿ: ಸಾಲದ ಸುಳಿಯಲ್ಲಿರುವ ಡಿಎಚ್‌ಎಫ್‌ಎಲ್‌ ಕಂಪನಿಯನ್ನು ಸ್ವಾಧೀನ ಮಾಡಿಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ ಎಂದು ಪಿರಾಮಲ್‌ ಗ್ರೂಪ್‌ ಗುರುವಾರ ತಿಳಿಸಿದೆ.

ಡಿಎಚ್‌ಎಫ್‌ಎಲ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಪಿರಾಮಲ್‌ ಸಮೂಹವು ಸಾಲಗಾರರ ಸಮಿತಿಯ ಒಪ್ಪಿಗೆ ಕೇಳಿತ್ತು. ಅದಕ್ಕೆ, ಈ ವರ್ಷದ ಜನವರಿ 15ರಂದು ಸಮಿತಿಯು ಒಪ್ಪಿಗೆ ನೀಡಿತ್ತು. ಆ ಬಳಿಕ ಇದೀಗ ಆರ್‌ಬಿಐ ಒಪ್ಪಿಗೆ ದೊರೆತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಡಿಎಚ್‌ಎಫ್‌ಎಲ್‌ ₹ 13,095 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 934 ಕೋಟಿ ನಿವ್ವಳ ಲಾಭ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT