ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚ್ಯವನಪ್ರಾಶ್‌ಗೆ ವೈಜ್ಞಾನಿಕ ಆಧಾರ’: ಪತಂಜಲಿ

Last Updated 16 ಡಿಸೆಂಬರ್ 2021, 11:24 IST
ಅಕ್ಷರ ಗಾತ್ರ

ಬೆಂಗಳೂರು: ಆಯುರ್ವೇದ ಔಷಧಗಳಲ್ಲಿ ಒಂದಾಗಿರುವ ಚ್ಯವನಪ್ರಾಶ್‌ಗೆ ವೈಜ್ಞಾನಿಕ ಆಧಾರವನ್ನು ಪತಂಜಲಿ ಸಂಶೋಧನಾ ಸಂಸ್ಥೆಯ (‍ಪಿಆರ್‌ಐ) ವಿಜ್ಞಾನಿಗಳ ತಂಡ ನೀಡಿದೆ ಎಂದು ಪತಂಜಲಿ ಯೋಗಪೀಠ ಹೇಳಿದೆ.

ಪುರಾತನ ಆಯುರ್ವೇದ ಜ್ಞಾನವನ್ನು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಅರ್ಥೈಸುವ ಪ್ರಕ್ರಿಯೆಯಲ್ಲಿ ಇದು ಇನ್ನೊಂದು ಮೈಲಿಗಲ್ಲು ಎಂದು ಪತಂಜಲಿ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಚ್ಯವನಪ್ರಾಶ್‌ಅ‌ನ್ನು ಕೆಲವರು ಪ್ರತಿನಿತ್ಯ ಬಳಸುತ್ತಾರೆ. ‘ನಾವು ಕೆಮ್ಮು, ನೆಗಡಿ ಮತ್ತು ಜ್ವರಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುವ ಚಳಿಗಾಲದಲ್ಲಿ ಚ್ಯವನಪ್ರಾಶ್‌ ಸೇವಿಸುವಂತೆ ಸೂಚಿಸುವುದು ಇದೆ. ಇದುವರೆಗೆ ಚ್ಯವನಪ್ರಾಶ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಆಧಾರ ಇರಲಿಲ್ಲ.

ಉರಿಯೂತ, ಜ್ವರ, ಕೆಮ್ಮು ಮತ್ತು ನೆಗಡಿ ವಿರುದ್ಧದ ಹೋರಾಟದಲ್ಲಿ ಚ್ಯವನಪ್ರಾಶ್‌ಗೆ ದೇಹಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಪಿಆರ್‌ಐನ ವಿಜ್ಞಾನಿಗಳು ಈಗ ಕಂಡುಕೊಂಡಿದ್ದಾರೆ. ಅಧ್ಯಯನದ ಮೂಲಕ ಕಂಡುಕೊಂಡಿದ್ದನ್ನು ಫ್ರಂಟಿಯರ್ಸ್‌ ಇನ್ ಫಾರ್ಮಕಾಲಜಿ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT