ರಿಯಲ್ ಎಸ್ಟೇಟ್‌ನ ವಸತಿ ವಹಿವಾಟಿನಲ್ಲಿ ಕೈಗೆಟಕುವ ಮನೆಗಳ ವಿಭಾಗದ (₹45 ಲಕ್ಷದಿಂದ ₹1.2 ಕೋಟಿ) ಪಾಲೇ ದೊಡ್ಡದು. ಹೀಗಾಗಿ ನಾವು ಈ ವಿಭಾಗದಲ್ಲಿಯೇ ನಮ್ಮ ಗಮನವನ್ನು ಇನ್ನಷ್ಟು ಕೇಂದ್ರೀಕರಿಸಲು ಬಯಸುತ್ತೇವೆ. ಗ್ರಾಹಕರು ನೀಡುವ ಹಣಕ್ಕೆ ಅಳತೆಮಾಡಬಹುದಾದ ರೀತಿಯಲ್ಲಿ ಮೌಲ್ಯ ತಂದುಕೊಡುವ ಭರವಸೆ ನೀಡುತ್ತೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.