ಶುಕ್ರವಾರ, ನವೆಂಬರ್ 22, 2019
20 °C

‘ದೇಶಕ್ಕೆ 12 ಸರ್ಕಾರಿ ಬ್ಯಾಂಕ್‌ಗಳು ಸಾಕು’

Published:
Updated:

ನವದೆಹಲಿ: ‘ನವ ಭಾರತದ ಅಗತ್ಯಗಳನ್ನು ಈಡೇರಿಸಲು ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು ಸಾಕು’ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು 10 ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುತ್ತಿದೆ. ಇದರಿಂದ 2017ರಲ್ಲಿ ಇದ್ದ 27 ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿಕೆಯಾಗಲಿದೆ. 

‘₹ 350 ಲಕ್ಷ ಕೋಟಿ ಆರ್ಥಿಕತೆಯನ್ನು ಸಾಧಿಸಲು ದೊಡ್ಡ ಬ್ಯಾಂಕ್‌ಗಳ ಅಗತ್ಯ ಇದೆ. ವಿಲೀನದ ಬಳಿಕ ದೊಡ್ಡ ಬ್ಯಾಂಕ್‌ಗಳ ಸಂಖ್ಯೆ ಆರು ಏರಿಕೆಯಾಗಲಿದ್ದು, ಗರಿಷ್ಠ ಬಂಡವಾಳ ಮೂಲ, ಆಡಳಿತದಲ್ಲಿ ದಕ್ಷತೆಯಿಂದಾಗಿ ಆರ್ಥಿಕ ವೃದ್ಧಿಗೆ ನೆರವಾಗಲಿವೆ’ ಎಂದು ವಿಲೀನವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)