ಮುಂಬೈ: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಮಂಗಳವಾರ 73 ಪೈಸೆಗಳಷ್ಟು ಚೇತರಿಕೆ ಕಂಡಿದೆ. ಇದಕ್ಕೆ ಒಂದು ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಕಟಿಸಿದ ನಗದು ಲಭ್ಯತೆ ಹೆಚ್ಚಳದ ಕ್ರಮಗಳು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಷೇರು ಮಾರುಕಟ್ಟೆಗಳಲ್ಲಿ ಮಂಗಳವಾರ ಕಂಡುಬಂದ ಚೇತರಿಕೆಯ ವಹಿವಾಟು ಕೂಡ ರೂಪಾಯಿ ಮೌಲ್ಯವರ್ಧನೆಗೆ ನೆರವಾಯಿತು ಎನ್ನಲಾಗಿದೆ. ದಿನದ ಅಂತ್ಯದ ಹೊತ್ತಿಗೆ ರೂಪಾಯಿ ಮೌಲ್ಯವು ಡಾಲರ್ ಎದುರು 72.87 ಆಗಿತ್ತು.

ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಇಷ್ಟೊಂದು ಚೇತರಿಕೆ ಕಂಡಿರುವುದು ಕಳೆದ 21 ತಿಂಗಳುಗಳ ಅವಧಿಯಲ್ಲಿ ಇದೇ ಮೊದಲು ಎಂದು ರಾಯಿಟರ್ಸ್ ವರದಿ ಮಾಡಿದೆ.

‘ಡಾಲರ್ ದುರ್ಬಲ ಆಗಿದ್ದು ಹಾಗೂ ಭಾರತದ ಷೇರುಪೇಟೆಗಳಿಗೆ ಹಣ ಹರಿದು ಬಂದ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಚೇತರಿಕೆ ಕಂಡುಕೊಂಡಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ನ ವಿಶ್ಲೇಷಕ ಗೌರಂಗ್ ಸೋಮಯ್ಯ ಹೇಳಿದರು.

ಹೂಡಿಕೆದಾರರು ಡಾಲರ್ನಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದು ಕೂಡ ರೂಪಾಯಿ ಮೌಲ್ಯ ಚೇತರಿಕೆಗೆ ಒಂದು ಕಾರಣ ಎಂದು ರಿಲಯನ್ಸ್ ಸೆಕ್ಯುರಿಟೀಸ್ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.