ರೂಪಾಯಿ ಚೇತರಿಕೆ

7

ರೂಪಾಯಿ ಚೇತರಿಕೆ

Published:
Updated:

ಮುಂಬೈ : ಸತತ 6 ವಹಿವಾಟಿನ ದಿನಗಳಲ್ಲಿ ಕುಸಿತ ಕಂಡಿದ್ದ ಡಾಲರ್‌ ಎದುರಿನ ರೂಪಾಯಿ ಬೆಲೆ, ಬುಧವಾರ 18 ಪೈಸೆಗಳಷ್ಟು ಚೇತರಿಕೆ ಕಂಡಿತು.

ವಿದೇಶಿ ಕರೆನ್ಸಿಗಳ ಎದುರು ಡಾಲರ್ ಬೆಲೆ ಕಡಿಮೆಯಾಗಿದ್ದರಿಂದ ರಫ್ತುದಾರರು ಡಾಲರ್‌ ಮಾರಾಟಕ್ಕೆ ಆದ್ಯತೆ ನೀಡಿದರು. ಇದರಿಂದ ರೂಪಾಯಿ ಬೆಲೆ ಚೇತರಿಕೆ ದಾಖಲಿಸಿ 74.21ರಲ್ಲಿ ವಹಿವಾಟು ಕೊನೆಗೊಳಿಸಿತು.

‘ಮ್ಯಾಜಿಕ್ ಬ್ರಿಕ್ಸ್’ನ ಡಿಜಿಟಲ್‌ ಸೇವೆ

ಬೆಂಗಳೂರು: ರಿಯಲ್‌ ಎಸ್ಟೇಟ್‌ ವಲಯದ ಅಂತರ್ಜಾಲ ತಾಣ ‘ಮ್ಯಾಜಿಕ್ ಬ್ರಿಕ್ಸ್’  ಮೊದಲ ಬಾರಿಗೆ ಬ್ರ್ಯಾಂಡ್ ಪರಿಚಯಿಸುವ ಡಿಜಿಟಲ್ ಸೇವೆ ಆರಂಭಿಸಿದೆ.

ಸಣ್ಣ ಹಾಗೂ ಮಧ್ಯಮ ಗಾತ್ರದ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವವರು ತಮ್ಮ ಗ್ರಾಹಕರೊಂದಿಗೆ ದೃಢವಾದ ಸಂಬಂಧವನ್ನು ಬೆಸೆಯಲು ಬ್ರ್ಯಾಂಡ್ ಸ್ಟೋರ್ ಆರಂಭಿಸಿದೆ. ಮ್ಯಾಜಿಕ್ ಬ್ರಿಕ್ಸ್‌ನ ಬ್ರಾಂಡ್ ಸ್ಟೋರ್ ಮನೆ ಖರೀದಿಸಲು ಬಯಸುವ ಗ್ರಾಹಕರಿಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತಹ ವಿಡಿಯೊಗಳನ್ನು ಪೂರೈಸಿ ನೆರವಾಗುತ್ತಿದೆ. 

 ಪೇಟಿಎಂ ಮಾಲ್ ಕಮಿಷನ್‌ ವಿನಾಯ್ತಿ

ಬೆಂಗಳೂರು: ಚಿಲ್ಲರೆ ಮಾರಾಟಗಾರರ ಜತೆಗಿನ ತನ್ನ ಬಾಂಧವ್ಯ  ಬಲಪಡಿಸಿಕೊಳ್ಳುವ ಉದ್ದೇಶಕ್ಕೆ ಪೇಟಿಎಂ ಮಾಲ್, ಈ ಹಬ್ಬದ ಋತುವಿಗೆ ಅನ್ವಯವಾಗುವಂತೆ ಮೊಬೈಲ್, ಬೃಹತ್ ಗೃಹೋಪಯೋಗಿ ವಸ್ತುಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಸಾಂಪ್ರದಾಯಿಕ ಕ್ರಮದಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಮಿಷನ್ ಪಾವತಿಯಿಂದ ವಿನಾಯ್ತಿ ನೀಡಿದೆ.

 ತನ್ನೊಂದಿಗೆ ಸಹಭಾಗಿತ್ವ ಹೊಂದಿರುವ ಚಿಲ್ಲರೆ ಮಾರಾಟ ಮಳಿಗೆಗಳಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗುವಂತೆ ಮಾಡುವುದು ‘ಪೇಟಿಎಂ’ನ ಉದ್ದೇಶವಾಗಿದೆ. ಇದರಿಂದ ಆನ್-ಲೈನ್ ಮತ್ತು ಆಫ್-ಲೈನ್ ಎರಡು ಮಾದರಿಯಲ್ಲೂ ಗ್ರಾಹಕರಿಗೆ ಆಕರ್ಷಕ ರಿಯಾಯ್ತಿ ಸಿಗಲಿದೆ ಎಂದು ಪೇಟಿಎಂ ಮಾಲ್ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !