ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಚೇತರಿಕೆ: ಡಾಲರ್‌ ಎದುರು 46 ಪೈಸೆ ಗಳಿಕೆ

Last Updated 5 ಆಗಸ್ಟ್ 2022, 4:56 IST
ಅಕ್ಷರ ಗಾತ್ರ

ಮುಂಬೈ: ವಿತ್ತೀಯ ನೀತಿಯಲ್ಲಿ ಆರ್‌ಬಿಐ ಶುಕ್ರವಾರ ಕೈಗೊಳ್ಳಲಿರುವ ನಿರ್ಧಾರದ ನಿರೀಕ್ಷೆ, ತೈಲ ಬೆಲೆ ಕುಸಿತ, ಡಾಲರ್‌ ಅಪಮೌಲ್ಯದ ಹಿನ್ನೆಲೆಯಲ್ಲಿ ರೂಪಾಯಿ ಗಳಿಕೆ ಹೆಚ್ಚಿಸಿಕೊಂಡಿದೆ.

ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ 46 ಪೈಸೆ ಗಳಿಕೆ ಕಂಡು, 78.94ರಂತೆ ವಹಿವಾಟುಗೊಂಡಿತು‌. ಹಿಂದಿನ ದಿನದ ವಹಿವಾಟು ಮುಕ್ತಾಯದ ವೇಳೆ ರೂಪಾಯಿ 79.4650ರಷ್ಟು ಇತ್ತು.

ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿಮೂರು ದಿನಗಳ ಸಭೆಯ ಅಂತ್ಯದಲ್ಲಿ ಆರ್‌ಬಿಐ ಪ್ರಕಟಿಸಲಿರುವ ವಿತ್ತೀಯ ನೀತಿ ನಿರ್ಧಾರವನ್ನು ಮಾರುಕಟ್ಟೆ ಕುತೂಹಲದಿಂದ ಎದುರು ನೋಡುತ್ತಿದೆ. ಆರ್‌ಬಿಐ ತನ್ನ ಪ್ರಮುಖ ಬಡ್ಡಿದರವನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT