ಶುಕ್ರವಾರ, ಡಿಸೆಂಬರ್ 2, 2022
20 °C

ಮೆಟಾದ ಭಾರತದ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹೊಸದಿಲ್ಲಿ: ಫೇಸ್‌ಬುಕ್‌ನ ‌ಮಾತೃ ಸಂಸ್ಥೆ ಮೆಟಾದ ಭಾ‌ರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಲಾಗಿದೆ.

ಅಜಿತ್‌ ಮೋಹನ್‌ ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ವಾರದ ಬಳಿಕ ಸಂಧ್ಯಾ ಅವರ ನೇಮಕವಾಗಿದೆ.

2023ರ ಜನವರಿ 1 ರಂದು ಸಂಧ್ಯಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಏಷ್ಯಾ ಪೆಸಿಫಿಕ್‌ ವಲಯದ ಉಪಾಧ್ಯಕ್ಷ ಡಾನ್‌ ನ್ಯಾರಿ ಅವರಿಗೆ ವರದಿ ಮಾಡಲಿದ್ದಾರೆ.

2016ರಲ್ಲಿ ಫೇಸ್‌ಬುಕ್‌ ಸೇರಿದ್ದ ಸಂಧ್ಯಾ, ಫೇಸ್‌ಬುಕ್‌ನ ದಕ್ಷಿಣ ಏಷ್ಯಾದ ಇ–ಕಾಮರ್ಸ್‌ ವಿಭಾಗ ಮುಖ್ಯಸ್ಥರಾಗಿದ್ದಾರೆ. ಈ ವೇಳೆ ಸಿಂಗಾಪುರ ಹಾಗೂ ವಿಯೇಟ್ನಾಂನಲ್ಲಿ ಫೇಸ್‌ಬುಕ್‌ನ ಬ್ಯುಸಿನೆಸ್‌ ಹೆಚ್ಚಿಸುವಲ್ಲಿ ಪ್ರಮುಖ ‍ಪಾತ್ರ ವಹಿಸಿದ್ದರು. ಅವರು ಇನ್ನು ಮುಂದೆ ಭಾರತಕ್ಕೆ ಮರಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು