ನವದೆಹಲಿ: ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಅಗ್ನಿವೀರರಿಗೆ ವಿಶೇಷ ವೈಯಕ್ತಿಕ ಸಾಲದ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಆರಂಭಿಸಿದೆ.

79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬ್ಯಾಂಕ್ ಈ ಹೊಸ ಯೋಜನೆ ಘೋಷಿಸಿದೆ.

ಎಸ್ಬಿಐನಲ್ಲಿ ವೇತನ ಖಾತೆ ಹೊಂದಿರುವ ಅಗ್ನಿವೀರರು ಈ ಸಾಲದ ಯೋಜನೆಯ ಅಡಿ ₹4 ಲಕ್ಷದವರೆಗೆ ಯಾವುದೇ ಅಡಮಾನ ಇಲ್ಲದೇ ಸಾಲ ಪಡೆಯಬಹುದು. ಜೊತೆಗೆ ಸಂಸ್ಕರಣಾ ಶುಲ್ಕವು ಇರುವುದಿಲ್ಲ ಎಂದು ಬ್ಯಾಂಕ್ ಗುರುವಾರ ತಿಳಿಸಿದೆ.

ಸೆಪ್ಟೆಂಬರ್ 30ರವರೆಗೆ ಎಲ್ಲ ರಕ್ಷಣಾ ಸಿಬ್ಬಂದಿಗೆ ಶೇ 10.50ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.