ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಆರ್ಥಿಕ ಚೇತರಿಕೆಯ ಚಿಂತೆ

ಮಾರಾಟದ ಒತ್ತಡ: ಸತತ ನಾಲ್ಕನೇ ದಿನವೂ ಸೂಚ್ಯಂಕ ಇಳಿಕೆ
Last Updated 22 ಸೆಪ್ಟೆಂಬರ್ 2020, 13:19 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕತೆಯು ಚೇತರಿಸಿಕೊಳ್ಳುವ ಬಗೆಗಿನ ಕಳವಳ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಇಳಿಮುಖ ವಹಿವಾಟು ದೇಶಿ ಷೇರುಪೇಟೆಗಳಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು.

ಹೂಡಿಕೆದಾರರು ಮಾರಾಟಕ್ಕೆ ಗಮನ ನೀಡಿದ್ದರಿಂದ ಸತತ ನಾಲ್ಕನೇ ದಿನವೂ ಸೂಚ್ಯಂಕಗಳು ಇಳಿಕೆ ಕಂಡವು. ಡಾಲರ್‌ ಎದುರು ರೂಪಾಯಿ ಮೌಲ್ಯದ ಇಳಿಕೆ ಹಾಗೂ ಪ್ರಮುಖ ಕಂಪನಿಯ ಷೇರುಗಳ ಮೌಲ್ಯ ಇಳಿಕೆಯು ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿದವು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 300 ಅಂಶ ಇಳಿಕೆಯಾಗಿ 37,734 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 97 ಅಂಶ ಇಳಿಕೆಯಾಗಿ 11,153 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ನಷ್ಟ: ಮಾರುತಿ ಕಂಪನಿಯ ಷೇರು ಶೇಕಡ 2.83ರಷ್ಟು ಗರಿಷ್ಠ ನಷ್ಟ ಕಂಡಿತು. ಎಲ್‌ಆ್ಯಂಡ್‌ಟಿ, ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಒಎನ್‌ಜಿಸಿ, ಎಚ್‌ಡಿಎಫ್‌ಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಏಷ್ಯನ್‌ ಪೇಂಟ್ಸ್‌ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.

ಎಚ್‌ಸಿಎಲ್‌ ಟೆಕ್‌, ಟಿಸಿಎಸ್ ಮತ್ತು ಟೆಕ್‌ ಮಹೀಂದ್ರಾ ಷೇರುಗಳು ಶೇ 2.43ರವರೆಗೂ ಏರಿಕೆ ಕಂಡಿವೆ. ವಾಲ್‌ ಸ್ಟ್ರೀಟ್‌‌ ಅತಿಯಾದ ಮಾರಾಟದ ಒತ್ತಡ ಎದುರಿಸಿದ್ದರಿಂದ ಏಷ್ಯಾದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಯುರೋಪಿನ ಷೇರುಪೇಟೆಗಳು ಸ್ಥಿರ ವಹಿವಾಟು ನಡೆಸಿದವು.

ಅಂಕಿ–ಅಂಶ

* 1.70% - ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಶ್ರೇಣಿ ಸೂಚ್ಯಂಕಗಳ ಇಳಿಕೆ

* 20 ಪೈಸೆ -ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ

* 1.30% -ಬ್ರೆಂಟ್‌ ತೈಲ ದರದಲ್ಲಿ ಆಗಿರುವ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT