ಭಾನುವಾರ, ಆಗಸ್ಟ್ 1, 2021
23 °C

ಷೇರುಪೇಟೆ ಸೂಚ್ಯಂಕ 99 ಅಂಶ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಮುಖ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಷೇರುಗಳ ಬೆಲೆ  ಏರಿಕೆ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರ 99 ಅಂಶಗಳ ಚೇತರಿಕೆ ಕಂಡಿತು.

ದಿನದ ವಹಿವಾಟಿನಲ್ಲಿ 430 ಅಂಶಗಳವರೆಗೆ ಹೆಚ್ಚಳ ಕಂಡಿದ್ದ ಸೂಚ್ಯಂಕವು ವಹಿವಾಟಿನ ಅಂತ್ಯಕ್ಕೆ ಗಳಿಕೆಯ ಬಹುಭಾಗವನ್ನು ಕಳೆದುಕೊಂಡೂ 99 ಅಂಶಗಳ ಹೆಚ್ಚಳದಿಂದ 36,693.69 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆಯ ‘ನಿಫ್ಟಿ’ 34.65 ಅಂಶ ಹೆಚ್ಚಾಗಿ 10,802 ಅಂಶಗಳಿಗೆ ತಲುಪಿತು.

ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್‌, ಎಚ್‌ಯುಎಲ್‌ ಮತ್ತು ಐಟಿಸಿ ಷೇರುಗಳು ಲಾಭ ಮಾಡಿಕೊಂಡವು.

ತನ್ನ ವಾಹನ ಹಣಕಾಸು ಅಂಗಸಂಸ್ಥೆಯಲ್ಲಿ ಹಿತಾಸಕ್ತಿ ಸಂಘರ್ಷ ಮತ್ತು ಸಾಲ ನೀಡಿಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡದಿರುವ ಕುರಿತು ಎಚ್‌ಡಿಎಫ್‌ಸಿ ಬ್ಯಾಂಕ್‌  ತನಿಖೆ ನಡೆಸಿರುವುದಾಗಿ ವರದಿಯಾಗಿರುವುದು ಅದರ ಷೇರುಗಳ ಬೆಲೆ ಶೇ 2ರಷ್ಟು ಕುಸಿಯುವಂತೆ ಮಾಡಿತು.

ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸೋಲ್‌ ಷೇರುಪೇಟೆಗಳಲ್ಲಿ ಖರೀದಿ ಆಸಕ್ತಿ ಕಂಡು ಬಂದಿತ್ತು. ಇದು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲನಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು