ಗುರುವಾರ , ಜೂನ್ 30, 2022
21 °C

ಮಾರಾಟದ ಒತ್ತಡ: ಸೆನ್ಸೆಕ್ಸ್‌ 334 ಅಂಶ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳು ಆರಂಭದಲ್ಲಿ ಕಂಡುಕೊಂಡಿದ್ದ ಗಳಿಕೆಯನ್ನು ಮಾರಾಟದ ಒತ್ತಡಕ್ಕೆ ಒಳಗಾಗಿ ಕಳೆದುಕೊಂಡವು. ದಿನದ ಕೊನೆಯಲ್ಲಿ ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು.

ಜಾಗತಿಕ ಷೇರುಪೇಟೆಗಳ ಇಳಿಮುಖ ವಹಿವಾಟಿನಿಂದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌, ಬ್ಯಾಂಕಿಂಗ್‌ ಮತ್ತು ಮೂಲಸೌಕರ್ಯ ಷೇರುಗಳು ಲಾಭಗಳಿಕೆಯ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು. ರೂಪಾಯಿ ಮೌಲ್ಯ ಇಳಿಕೆಯೂ ಹೂಡಿಕೆದಾರರ ವಿಶ್ವಾಸವನ್ನು ತಗ್ಗಿಸಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 334 ಅಂಶ ಇಳಿಕೆ ಕಂಡು 51,941 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 105 ಅಂಶ ಇಳಿಕೆಯಾಗಿ 15,635 ಅಂಶಗಳಿಗೆ ತಲುಪಿತು.

ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ನ (ಇಸಿಬಿ) ಹಣಕಾಸು ನೀತಿಯ ನಿರ್ಧಾರಗಳು ಮತ್ತು ಅಮೆರಿಕದ ಹಣದುಬ್ಬರದ ಅಂಕಿ–ಅಂಶಗಳು ಗುರುವಾರ ಹೊರಬೀಳಲಿವೆ. ಹೀಗಾಗಿ ಜಾಗತಿಕ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದರು. ಆರ್ಥಿಕ ಚೇತರಿಕೆಗಾಗಿ ಬಾಂಡ್‌ ಖರೀದಿಸುವ ನೀತಿಯನ್ನು ಇಸಿಬಿ ಮುಂದುವರಿಸುವ ಸಾಧ್ಯತೆ ಇದೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದರು ರೂಪಾಯಿ ಮೌಲ್ಯ 8 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 72.97ರಂತೆ ವಿನಿಮಯಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು