11 ಸಾವಿರ ಗಡಿ ದಾಟಿದ ‘ನಿಫ್ಟಿ’

ಬುಧವಾರ, ಮಾರ್ಚ್ 27, 2019
26 °C
ಸತತ 3ನೇ ದಿನವೂ ಸೂಚ್ಯಂಕ ಗಳಿಕೆ

11 ಸಾವಿರ ಗಡಿ ದಾಟಿದ ‘ನಿಫ್ಟಿ’

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ಚಟುವಟಿಕೆ ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 194 ಅಂಶ ಹೆಚ್ಚಾಗಿ 36,636 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ನಿಫ್ಟಿ 66 ಅಂಶ ಹೆಚ್ಚಾಗಿ 11,053 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಭಾರತ–ಪಾಕಿಸ್ತಾನ ಮಧ್ಯೆ ಮೂಡಿದ್ದ ಉದ್ವಿಗ್ನ ಪರಿಸ್ಥಿತಿ ತಗ್ಗಿರುವುದರಿಂದ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಬಜಾಜ್‌ ಫೈನಾನ್ಸ್‌ ಶೇ 2.60ರಷ್ಟು ಗರಿಷ್ಠ ಗಳಿಕೆ ಕಂಡಿತು. ಐಸಿಐಸಿಐ ಬ್ಯಾಂಕ್‌ (ಶೇ 2.55) ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ (ಶೇ 2.15) ಷೇರು ಬೆಲೆಗಳೂ ಹೆಚ್ಚಾಗಿವೆ.

ಮೂರು ದಿನಗಳಿಂದ ಖರೀದಿ ಚಟುವಟಿಕೆ ಉತ್ತಮವಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿವೆ ಎಂದು ಪರಿಣತರು ಹೇಳಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 21 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 70.28ರಂತೆ ಮಾರಾಟವಾಯಿತು.

ವಿದೇಶಿ ಹೂಡಿಕೆ ಮತ್ತು ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದ ರೂಪಾಯಿ ಮೌಲ್ಯದಲ್ಲಿ ವೃದ್ಧಿಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ಇದರಿಂದ ಮಾರುಕಟ್ಟೆ ಮೌಲ್ಯದಲ್ಲಿನ ಹೂಡಿಕೆದಾರರ ಸಂಪತ್ತಿನಲ್ಲಿಯೂ ಏರಿಕೆ ಕಂಡುಬರುತ್ತಿದೆ. ವಾರದ ವಹಿವಾಟಿನ ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 3.11 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 142 ಲಕ್ಷ ಕೋಟಿಗಳಿಂದ ₹ 145.11 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !