ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಉಕ್ಕು ಘಟಕ ಸ್ಥಾಪನೆ: ಗಂಗೂಲಿ

Published 16 ಸೆಪ್ಟೆಂಬರ್ 2023, 15:28 IST
Last Updated 16 ಸೆಪ್ಟೆಂಬರ್ 2023, 15:28 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳದ ಸಾಲ್ಬನಿಯಲ್ಲಿ ಉಕ್ಕು ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ‘ಈ ಯೋಜನೆಗೆ ಕ್ಯಾಪ್ಟನ್‌ ಸ್ಟೀಲ್‌ ಪ್ರಮುಖ ಹೂಡಿಕೆದಾರ ಆಗಿರಲಿದೆ’ ಎಂದು ಕಂಪನಿಯ ನಿರ್ದೇಶಕ ಸಂಜಯ್‌ ಗುಪ್ತಾ ಹೇಳಿದ್ದಾರೆ.

‘ನಾನು ಕೇವಲ ಕ್ರಿಕೆಟ್‌ ಮಾತ್ರ ಆಡುತ್ತೇನೆ ಎಂದು ಹಲವರು ಭಾವಿಸಿರಬಹುದು. ಆದರೆ, 2007ರಲ್ಲಿ ನಾನು ಚಿಕ್ಕದಾದ  ಉಕ್ಕು ಘಟಕ ಆರಂಭಿಸಿದೆ. ಮುಂದಿನ ಐದರಿಂದ ಆರು ತಿಂಗಳಿನಲ್ಲಿ ಹೊಸ ಘಟಕದ ನಿರ್ಮಾಣ ಕಾರ್ಯ ಆರಂಭ ಆಗಲಿದೆ’ ಎಂದು ಗಂಗೂಲಿ ತಿಳಿಸಿದ್ದಾರೆ.

‘ಸೌರವ್ ಅವರು ಆಪ್ತ ಸ್ನೇಹಿತರಾಗಿದ್ದು, ದೀರ್ಘ ಸಮಯದಿಂದ ಒಡನಾಟ ಹೊಂದಿದ್ದಾರೆ. ಗಂಗೂಲಿ ಅವರ ಬೆಂಬಲದಿಂದ ಪಶ್ಚಿಮ ಬಂಗಾಳದಲ್ಲಿ ಉಕ್ಕು ಘಟಕ ಸ್ಥಾಪಿಸಲಾಗುವುದು. 600–700 ಎಕರೆ ಜಾಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ.

‘10 ಲಕ್ಷ ಟನ್‌ ಸಾಮರ್ಥ್ಯದ ಘಟಕ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಯೋಜನಾ ವೆಚ್ಚವು ಅಂದಾಜು ₹2,500 ಕೋಟಿಯಷ್ಟು ಆಗಲಿದೆ. ಎರಡೂವರೆ ವರ್ಷದೊಳಗೆ ಉತ್ಪಾದನೆ ಆರಂಭಿಸುವ ಯೋಜನೆ ಹೊಂದಲಾಗಿದೆ’ ಎಂದು ಗುಪ್ತಾ ತಿಳಿಸಿದ್ದಾರೆ.

ಕ್ಯಾಪ್ಟನ್‌ ಟಿಎಂಟಿ ಬಾರ್‌ಗೆ ಗಂಗೂಲಿ ಅವರು ಬ್ರ್ಯಾಂಡ್‌ ರಾಯಭಾರಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT