ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಜ್ಯೋತಿ ಯಾತ್ರೆಗೆ ಚಾಲನೆ

Published 9 ಮೇ 2024, 16:23 IST
Last Updated 9 ಮೇ 2024, 16:23 IST
ಅಕ್ಷರ ಗಾತ್ರ

ಮಾರ್ಸೆ (ಫ್ರಾನ್ಸ್): ಅತ್ಯಾಕರ್ಷಕ ‘ಬೆಲೆಮ್‌’ ಹೆಸರಿನ ಹಡಗಿನಲ್ಲಿ ಒಲಿಂಪಿಕ್ ಜ್ಯೋತಿ ಬುಧವಾರ ಇರುಳಲ್ಲಿ ಇಲ್ಲಿ ತಲುಪಿತು. ಭವ್ಯ ಸ್ವಾಗತ ಸಮಾರಂಭದ ನಂತರ ಜ್ಯೋತಿ ಯಾತ್ರೆ ಗುರುವಾರ ನಗರದಲ್ಲಿ ಆರಂಭವಾಯಿತು.

ಒಲಿಂಪಿಕ್‌ ಜ್ಯೋತಿಯಾತ್ರೆ 11 ವಾರಗಳ ಕಾಲ ದೇಶದ 450 ನಗರಗಳನ್ನು ಕ್ರಮಿಸಲಿದೆ. ಈ ಯಾತ್ರೆಯುದ್ದಕ್ಕೆ  10,000 ಮಂದಿ ಜ್ಯೋತಿ ಹಿಡಿದು ಓಡಲಿದ್ದಾರೆ. ಒಲಿಂಪಿಕ್ಸ್‌ ಜುಲೈ 26ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ.

ಮೆಡಿಟರೆನಿಯನ್‌ ಸಾಗರಕ್ಕೆ ಮುಖಮಾಡಿರುವ ಐತಿಹಾಸಿಕ ನಾಟ್ರೆ ಡಾಮ್ ಲಾ ಗಾರ್ದೆ ಬೆಸಿಲಿಕಾದಿಂದ ಜ್ಯೋತಿ ಯಾತ್ರೆಯನ್ನು ಮಾಜಿ ಫುಟ್‌ಬಾಲ್ ಆಟಗಾರ ಬಾಸಿಲ್ ಬೊಲಿ ಅವರು ಆರಂಭಿಸಿದರು. 1990ರ ದಶಕದಲ್ಲಿ ಅವರು ಮಾರ್ಸೆ ತಂಡಕ್ಕೆ ಆಡಿದ್ದರು.

‘ನನಗೆ ಹೆಮ್ಮೆ ಎನಿಸಿದೆ. ಈ ಸಂಭ್ರಮ ಹೇಳಿಕೊಳ್ಳಲು ಆಗದು. ಒಲಿಂಪಿಕ್‌ ಜ್ಯೋತಿ ಕ್ರೀಡೆಯ ಸಂಕೇತ’ ಎಂದು ಬೊಲಿ ಹೇಳಿದರು.

ಇದಕ್ಕೆ ಮೊದಲು ಒಲಿಂಪಿಕ್ ಜ್ಯೋತಿ ಹೊತ್ತು ತಂದ ‘ಬೆಲೆಮ್‌’ ಹಡಗು ಮಾರ್ಸೆ ಬಂದರು ತಲುಪುವ ವೇಳೆ 2,30,000 ಜನರು ಸೇರಿ ಭವ್ಯ ಸ್ವಾಗತ ಕೋರಿದರು ಎಂದು ಮೇಯರ್‌ ಬೆನೊಯಿ ಪಯನ್ ಹೇಳಿದರು.

ಒಲಿಂಪಿಕ್ಸ್‌ನ ಸೇಲಿಂಗ್ ಸ್ಪರ್ಧೆಗಳು ಮಾರ್ಸೆಯಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT